ಭಾನುವಾರ, ಮೇ 16, 2021
22 °C

ಸಿಹಿ ಹೆಚ್ಚಾದರೆ ಹೃದಯಕ್ಕೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್ (ಪಿಟಿಐ): ನಿಮ್ಮ ನಾಲಿಗೆ ಹೆಚ್ಚು ಸಿಹಿಯನ್ನು ಬೇಡುತ್ತದೆಯೇ? ಹಾಗಿದ್ದರೆ ಅದಕ್ಕೆ ಇಂದೇ ಕೊಂಚ ಬ್ರೇಕ್ ಹಾಕಿ.ಅತಿಯಾದ ಸಿಹಿ ಸೇವನೆ ಹೃದಯಕ್ಕೆ ತೊಂದರೆ ಎಂದು ಎಚ್ಚರಿಸಿದೆ ನೂತನ ಸಂಶೋಧನೆಯೊಂದು.ಸಕ್ಕರೆಯಲ್ಲಿರುವ ರಾಸಾಯನಿಕ ವಸ್ತುವೊಂದರ ಸಣ್ಣ ಕಣ, ಹಾಗೂ ಗ್ಲುಕೋಸ್ 6- ಪಾಸ್ಪೆಟ್ (ಜಿ6ಪಿ) ಅಂಶಗಳು ಹೃದಯದ ಒತ್ತಡಕ್ಕೆ ಕಾರಣವಾಗಿ ಹೃದಯ ಬಡಿತದ ಕ್ಷೀಣಿಸುವಿಕೆಗೆ ಪ್ರೇರಣೆ ನೀಡುತ್ತವೆ. ಇದರಿಂದ ಹೃದಯಕ್ಕೆ ಹಾನಿ ಉಂಟಾಗುತ್ತದೆ ಎಂದು ಇಲ್ಲಿನ ಟೆಕ್ಸಾಸ್ ಆರೋಗ್ಯ ವಿಜ್ಞಾನ ಕೇಂದ್ರದ ಸಂಶೋಧನೆ ತಿಳಿಸಿದೆ.ಸಕ್ಕರೆಯಲ್ಲಿರುವ ಜಿ6ಪಿ ಅಂಶವು ಹೆಚ್ಚು ಸಿಹಿ ಅಂಶವನ್ನು ಶೇಖರಿಸುತ್ತದೆ. ಈ ರೀತಿಯ ಹಾನಿಗೆ ಯಾವುದೇ ಔಷಧಗಳನ್ನು ಕಂಡುಹಿಡಿಯಲಾಗಿಲ್ಲ. 20 ವರ್ಷಗಳಿಂದ ಈ ಕುರಿತು ಸಂಶೋಧನೆಗಳು ನಡೆಯುತ್ತಿವೆ.

ಪ್ರಾಣಿಗಳ ಮೇಲೆ ಹಲವು ಬಾರಿ ಔಷಧಿ ನೀಡಿ ಪ್ರಯೋಗ ಮಾಡಲಾಗಿದೆ. ಈ ಕುರಿತು ಏನೇ ಸಂಶೋಧನೆಗಳು ನಡೆದರೂ ಜಿ6ಪಿ ಕಾರಣದಿಂದ ಅದು ಸಫಲವಾಗುತ್ತಿಲ್ಲ.ಹೃದಯದ ಸ್ನಾಯುಗಳು ಅಧಿಕ ರಕ್ತದೊತ್ತಡ ಅಥವಾ ಇತರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ವಾಸಿಯಾಗಲೆಂದು ಅಧಿಕ ಪ್ರಮಾಣದಲ್ಲಿ ಗ್ಲೂಕೋಸ್ ಸೇವಿಸುತ್ತಿದ್ದರೆ ಇದು ಹೃದಯವನ್ನು ಮತ್ತಷ್ಟು ಹಾಳು ಮಾಡುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.