ಬುಧವಾರ, ಮೇ 19, 2021
24 °C

`ಸಿ' ಡಿವಿಷನ್ ಫುಟ್‌ಬಾಲ್: ಈಗಲ್ಸ್‌ಗೆ ಮಣಿದ ಐಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಈಗಲ್ಸ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಸಿ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ 3-1 ಗೋಲುಗಳಿಂದ ಐಟಿಸಿ ಎದುರು ಗೆಲುವು ಸಾಧಿಸಿತು.ವಿಜಯಿ ತಂಡದ ಸತೀಶ್ ಕುಮಾರ್ (14 ಹಾಗೂ 40ನೇ ನಿಮಿಷ) ಮತ್ತು ಮಣಿಕಂಠನ್ (44ನೇ ನಿ.) ಗೋಲು ತಂದಿತ್ತರು. ದಿನದ ಇನ್ನೊಂದು ಪಂದ್ಯದಲ್ಲಿ ನ್ಯೂ ಲಕ್ಕಿ ಸ್ಟಾರ್  5-3 ಗೋಲುಗಳಿಂದ ಭಾರತ್ ಮಾತಾ ಎದುರು ಗೆಲುವಿನ ನಗೆ ಬೀರಿತು.ಲಕ್ಕಿ ಸ್ಟಾರ್ ತಂಡದ ಕೆವಿನ್ ವೆಸ್ಲಿ 8ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ, 43ನೇ ನಿಮಿಷದಲ್ಲಿ ಎರಡನೇ ಗೋಲು ತಂದಿತ್ತರು. ಈ ತಂಡದ ಇನ್ನುಳಿದ ಗೋಲುಗಳನ್ನು ಓಂಪ್ರಕಾಶ್ (23, 30ನೇ ನಿ.) ಮತ್ತು ಕ್ಲೈಫೋರ್ಡ್ (48ನೇ ನಿ.) ಗಳಿಸಿದರು.ದಿಲೀಪ್ (15ನೇ ನಿ.), ದಿನೇಶ್ (17, 59ನೇ ನಿ.), ರೇಗೊ (46ನೇ ನಿ.) ಮತ್ತು ಪರ್ವಿನ್ (48ನೇ ನಿ.) ಗಳಿಸಿದ ಗೋಲುಗಳ ನೆರವಿನಿಂದ `515 ಎಬಿಡಬ್ಲ್ಯುಎಸ್' ತಂಡದವರು 5-1ಗೋಲುಗಳಿಂದ ಕ್ವೀನ್ಸ್ ಸ್ಟಾರ್ ಎದುರು ಗೆಲುವು ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.