ಶುಕ್ರವಾರ, ಮೇ 14, 2021
30 °C

'ಸಿ-17' ವಿಮಾನ ಭಾರತಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಸೇನಾ ಸಲಕರಣೆಗಳನ್ನು ಸಾಗಿಸುವ ಅತ್ಯಾಧುನಿಕ `ಸಿ-17 ಗ್ಲೋಬ್‌ಮಾಸ್ಟರ್-3' ವಿಮಾನವನ್ನು ಬೋಯಿಂಗ್ ಕಂಪೆನಿ ಭಾರತಕ್ಕೆ ಬುಧವಾರ ಹಸ್ತಾಂತರಿಸಿದೆ.ಬೋಯಿಂಗ್ ಕಂಪೆನಿಯು ಭಾರತದ ವಾಯುಪಡೆಗೆ ಪ್ರಸಕ್ತ ವರ್ಷ ಇನ್ನೂ ನಾಲ್ಕು ಹಾಗೂ 2014ರಲ್ಲಿ ಐದು `ಸಿ-17' ವಿಮಾನಗಳನ್ನು ಒದಗಿಸಲಿದೆ.ಈ ವಿಮಾನವು ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಿಮಾನ ನಿಲ್ದಾಣದಲ್ಲಿ ಜನವರಿ 22ರಿಂದ ಪ್ರಯೋಗಾರ್ಥ ಹಾರಾಟ ನಡೆಸಿತ್ತು. ಅದು ಯಶಸ್ವಿಯಾದ ಬಳಿಕ ಬುಧವಾರ ಭಾರತಕ್ಕೆ ಅದನ್ನು ಹಸ್ತಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.