ಗುರುವಾರ , ಮೇ 13, 2021
39 °C

ಸೀಟು ಮಾರಾಟದ ಮೇಲೆ ಕಣ್ಣಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಪರೀಕ್ಷಾ ಪ್ರಾಧಿಕಾರಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಿಇಟಿ ಕೌನ್ಸೆಲಿಂಗ್‌ನಲ್ಲಿ ಸೀಟು ಗಿಟ್ಟಿಸಿ ನಂತರ ಬೇರೆಯವರಿಗೆ ಮಾರಾಟ ಮಾಡುವ ದಂಧೆಯನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ ಸಂಬಂಧಿಸಿದವರಿಗೆ ನೋಟೀಸ್ ನೀಡಿರುವ ಕ್ರಮ ಸ್ವಾಗತಾರ್ಹ.ವಿಚಾರಣೆಗಾಗಿ ಕೇವಲ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನಷ್ಟೇ ಗಮನಕ್ಕೆ ತಂದುಕೊಂಡಂತಿದೆ. ಮೆಡಿಕಲ್ ಸೀಟುಗಳು ಮಾರಾಟವಾಗಿರುವುದು ಬಿ.ಎಸ್ಸಿ (ಅಗ್ರಿಕಲ್ಚರ್), ಬಿ.ಎಸ್ಸಿ (ಸಾಮಾನ್ಯ ಪದವಿ) ಮತ್ತು ಪಶುವೈದ್ಯಕೀಯ ಪದವಿ ತರಗತಿಗಳಿಗೆ ಹಾಜರಾಗಿರುವ ಅಭ್ಯರ್ಥಿಗಳ ಮೂಲಕ. ಪ್ರಾಧಿಕಾರವು ಎಲ್ಲ ಕೃಷಿ ವಿಶ್ವವಿದ್ಯಾಲಯಗಳು, ಪಶುವೈದ್ಯಕೀಯ ಮತ್ತು ಸಾಮಾನ್ಯ ಪದವಿ ಕಾಲೇಜುಗಳಲ್ಲಿ ದಾಖಲಾಗಿರುವ ಸಿಇಟಿ ಪಾಸಾಗಿ ಸೀಟು ಮಾರಾಟ ಮಾಡಿಕೊಂಡಿರುವ ಅಭ್ಯರ್ಥಿಗಳನ್ನು ಹುಡುಕಬೇಕಿದೆ.ಈ ಕಾರ್ಯವನ್ನು ಈ ವರ್ಷದಿಂದಲೇ  ಆರಂಭಿಸಿದರೆ ಮುಂದಿನ ವರ್ಷದಿಂದಲಾದರೂ ಈ ಅನಿಷ್ಟ ಪದ್ಧತಿ ಕೊನೆಗೊಂಡೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.