ಭಾನುವಾರ, ಏಪ್ರಿಲ್ 18, 2021
23 °C

ಸೀತಾಳ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ರಥೋತ್ಸವದಲ್ಲಿ ವಿವಿಧ ‘ನಾಡು’ಗಳ ಸಾವಿರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.ಪ್ರತಿವರ್ಷ ಹೋಳಿ ಹಬ್ಬದ ಜತೆಗೇ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ಮತ್ತು ಮೇಲುಗದ್ದಿಗೆ ಮುಳ್ಳಪ್ಪ ಸ್ವಾಮಿ ರಥೋತ್ಸವಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನ ಆರಂಭಗೊಳ್ಳುತ್ತವೆ.ಮುಳ್ಳಯ್ಯನಗಿರಿಯಿಂದ ದೇವರನ್ನು ಸೀತಾಳಯ್ಯನಗಿರಿಗೆ ತರಲಾಗಿತ್ತು. ಪೂಜೆ ನಂತರ ಮಧ್ಯಾಹ್ನ 12 ಗಂಟೆಗೆ ನಾಡ ದೇವರ ಅಡ್ಡೆ ಮೆರವಣಿಗೆ ಬಳಿಕ ಬೃಹತ್ ರಥವನ್ನು ಭಕ್ತರು ಉತ್ಸಾಹದಿಂದ ಎಳೆದರು. ಬಾಳೆಹಣ್ಣು, ಹೂವು ರಥದತ್ತ ಎಸೆಯುವ ಮೂಲಕ ಭಕ್ತರು ಭಕ್ತಿ ಪ್ರದರ್ಶಿಸಿದರು. ಹಲವು ರಾಜಕೀಯ ಮುಖಂಡರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.