ಸೀನಿಯರ್ ಮಹಿಳಾ ಹಾಕಿ : ಸೆಮಿಫೈನಲ್‌ಗೆ ಮುಂಬೈ, ಹರಿಯಾಣ

7

ಸೀನಿಯರ್ ಮಹಿಳಾ ಹಾಕಿ : ಸೆಮಿಫೈನಲ್‌ಗೆ ಮುಂಬೈ, ಹರಿಯಾಣ

Published:
Updated:
ಸೀನಿಯರ್ ಮಹಿಳಾ ಹಾಕಿ : ಸೆಮಿಫೈನಲ್‌ಗೆ ಮುಂಬೈ, ಹರಿಯಾಣ

ಬೆಂಗಳೂರು: ಮುಂಬೈ ಹಾಗೂ ಹರಿಯಾಣ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ಹಾಕಿ ಸಂಸ್ಥೆ ಆಶ್ರಯದ 56ನೇ ಐಎಚ್‌ಎಫ್ ರಾಷ್ಟ್ರೀಯ ಸೀನಿಯರ್ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ತಲುಪಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ 2-1 ಗೋಲುಗಳಿಂದ ಮಧ್ಯ ಪ್ರದೇಶ ತಂಡವನ್ನು ಮಣಿಸಿತು.ಎಲ್ಲಾ ಗೋಲುಗಳು ವಿರಾಮಕ್ಕೆ ಮುನ್ನವೇ ಬಂದಿದ್ದವು. ಗೋಲಿನ ಖಾತೆ ತೆರೆದಿದ್ದು ಮಧ್ಯ ಪ್ರದೇಶ. ಈ ತಂಡದ ಆಟಗಾರ್ತಿ ಗಂಗಿ ಮುಂಡು 4ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ತಂಡದ ಸರಿತಾ ಹನುಮಾನ್ ಎರಡು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಹರಿಯಾಣ ತಂಡದವರು 5-4 ಗೋಲುಗಳಿಂದ ಮಧ್ಯಪ್ರದೇಶ ಅಕಾಡೆಮಿ ತಂಡವನ್ನು ಸೋಲಿಸಿದರು.ಬುಧವಾರದ ಸೆಮಿಫೈನಲ್ ಪಂದ್ಯಗಳು: ಕರ್ನಾಟಕ-ಮುಂಬೈ (ಬೆಳಿಗ್ಗೆ 8.30ಕ್ಕೆ), ಭೋಪಾಲ್-ಹರಿಯಾಣ  (ಬೆಳಿಗ್ಗೆ 10.30ಕ್ಕೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry