ಶನಿವಾರ, ಡಿಸೆಂಬರ್ 7, 2019
21 °C

ಸೀಮಾಂಧ್ರ ಬಂದ್: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀಮಾಂಧ್ರ ಬಂದ್: ಜನಜೀವನ ಅಸ್ತವ್ಯಸ್ತ

ಹೈದರಾಬಾದ್ (ಪಿಟಿಐ): ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯಾದಗಿನಿಂದ ಇಲ್ಲಿಯವರೆಗೂ ಸೀಮಾಂಧ್ರ ಮತ್ತು ಕರಾವಳಿ ಆಂಧ್ರ ಭಾಗದಲ್ಲಿ  ಜನಸಾಮಾನ್ಯರ ಜೀವನ ಸಂಪೂರ್ಣವಾಗಿ ಆಸ್ತವ್ಯಸ್ತವಾಗಿದೆ.

ಒಂದು ತಿಂಗಳಿನಿಂದ ಈ ಭಾಗಗಳಲ್ಲಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ವಾಣಿಜ್ಯ ಮಳಿಗೆಗಳು ಮುಚ್ಚಿವೆ . ಆಂಧ್ರ ಸಾರಿಗೆ ಸಂಸ್ಥೆಯು  ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಕೇವಲ 1,500 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇಲ್ಲಿಯವರೆಗೂ 500ಕ್ಕೂ ಹೆಚ್ಚು ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ.ಸುಮಾರು 4 ಲಕ್ಷ ಸರ್ಕಾರಿ ನೌಕಕರು 2 ಲಕ್ಷ ಶಿಕ್ಷಕರು ಕಚೇರಿ ಮತ್ತು ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿದ್ದಾರೆ. ಸಾರಿಗೆ ವ್ಯತ್ಯಯದಿಂದ ಜನರು ಹೈರಾಣಾಗಿದ್ದಾರೆ. ಸುಮಾರು 15 ಲಕ್ಷಕ್ಕೂ ಹೆಚ್ಚು ದಿನಗೂಲಿ ನೌಕರರ ಜೀವನಕ್ಕೆ ತೀವ್ರ ತೊಂದರೆಯಾಗಿದೆ.ಸೀಮಾಂಧ್ರ ಮತ್ತು ಕರಾವಳಿ ಆಂಧ್ರದ 13 ಜಿಲ್ಲೆಗಳಲ್ಲಿ ಜನಜೀವನ ಮೂರಾಬಟ್ಟೆಯಾಗಿದೆ.

ಪ್ರತಿಕ್ರಿಯಿಸಿ (+)