ಶನಿವಾರ, ಆಗಸ್ಟ್ 24, 2019
27 °C

ಸೀಮಾಂಧ್ರ: ಮುಂದುವರಿದ ಪ್ರತಿಭಟನೆ

Published:
Updated:

ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಆಂಧ್ರಪ್ರದೇಶದ ಸೀಮಾಂಧ್ರದಲ್ಲಿ ನಡೆ ಯುತ್ತಿರುವ ಪ್ರತಿಭಟನೆ ಸೋಮವಾರ ಆರನೇ ದಿನಕ್ಕೆ ಕಾಲಿಟ್ಟಿದೆ.ಆಂಧ್ರದ ಕರಾವಳಿ, ರಾಯಲಸೀಮಾ ಭಾಗದ ಜಿಲ್ಲೆಗಳಲ್ಲಿ ಯುಪಿಎ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ, ಮೆರವಣಿಗೆ ಹಾಗೂ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು, ಆಂಧ್ರವನ್ನು ವಿಭಜಿಸದಂತೆ ಆಗ್ರಹಿಸಿದರು.ವಿಶಾಖಪಟ್ಟಣ, ಚಿತ್ತೂರು, ಕರ್ನೂಲು, ವಿಜಯವಾಡ, ತಿರುಪತಿ, ಅನಂತಪುರ, ಮದ್ದಿಲ ಪೇಲಂ, ಅನಕಪಲ್ಲಿ ಹಾಗೂ ಗಜುವಾಕಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಕೆಲವೆಡೆ ಪ್ರತಿಭಟನಾಕಾರರು ರಸ್ತೆಯಲ್ಲಿ ಆಹಾರ ಬೇಯಿಸಿಕೊಂಡು ಬಿಡಾರ ಹೂಡುವ ಮೂಲಕ ಸಂಚಾರಕ್ಕೆ ಅಡ್ಡಿಯುಂಟು ಮಾಡಿರುವ ವರದಿಯಾಗಿದೆ. ಸಮೈಕ್ಯ ಆಂಧ್ರ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಮತ್ತು ವಿವಿಧ ಸಂಘಟನೆಗಳು ಒಟ್ಟಾಗಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ವಿವಿಧ ವಕೀಲರ ಸಂಘಗಳು ಆಗಸ್ಟ್ 8ರವರೆಗೆ ನೀಡಿದ್ದ ಕೋರ್ಟ್ ಕಲಾಪ ಬಹಿಷ್ಕಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

Post Comments (+)