ಸೀಮಾ ಸುಂಕ ಇಲಾಖೆ ನಿವೃತ್ತ ಅಧಿಕಾರಿ ಬಂಧನ

7

ಸೀಮಾ ಸುಂಕ ಇಲಾಖೆ ನಿವೃತ್ತ ಅಧಿಕಾರಿ ಬಂಧನ

Published:
Updated:

ಬೆಂಗಳೂರು: ಕುವೈತ್‌ನಿಂದ ಕೊಚ್ಚಿಗೆ ಕಳುಹಿಸಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ನಕಲಿ ದಾಖಲೆಪತ್ರಗಳ ನೆರವಿನಿಂದ ಪಡೆದುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೀಮಾ ಸುಂಕ ಇಲಾಖೆ ನಿವೃತ್ತ ಉಪ ಆಯುಕ್ತ ಕೆ.ಎಸ್.ಚಂದ್ರಶೇಖರ್ ಅವರನ್ನು ಸಿಬಿಐ ಅಧಿಕಾರಿಗಳು ನಗರದಲ್ಲಿ ಮಂಗಳವಾರ ಬಂಧಿಸಿದ್ದಾರೆ.ಅನಿವಾಸಿ ಭಾರತೀಯರೊಬ್ಬರು 2008ರಲ್ಲಿ ಕುವೈತ್‌ನಿಂದ ತ್ರಿಶೂರ್ ವಿಮಾನ ನಿಲ್ದಾಣಕ್ಕೆ ಪ್ಲಾಸ್ಮಾ ಟಿ.ವಿ ಸೇರಿದಂತೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳುಹಿಸಿದ್ದರು. ಚಂದ್ರಶೇಖರ್, ತಮ್ಮ ಪ್ರಭಾವ ಬಳಸಿ ಆ ಸರಕುಗಳನ್ನು ಪಡೆದುಕೊಂಡಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.ಈ ಸಂಬಂಧ ಚಂದ್ರಶೇಖರ್ ಮತ್ತು ಅವರಿಗೆ ನೆರವು ನೀಡಿದ್ದ ಸೀಮಾ ಸುಂಕ ಇಲಾಖೆ ನಿವೃತ್ತ ಅಧಿಕಾರಿಗಳಾದ ಎಂ.ಪಿ.ಸಾವಿತ್ರಿ ಹಾಗೂ ಪಿ.ಆರ್.ಪಿ.ಪಣಿಕ್ಕರ್ ವಿರುದ್ಧ ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ಜ.5ರಂದು ಮೊಕದ್ದಮೆ ದಾಖಲಾಗಿತ್ತು. ಆರೋಪಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.ಚಂದ್ರಶೇಖರ್, ಆ ಎಲೆಕ್ಟ್ರಾನಿಕ್ ವಸ್ತುಗಳನ್ನು ಬೆಂಗಳೂರಿನ ನಿವಾಸಕ್ಕೆ ತೆಗೆದುಕೊಂಡು ಬಂದ್ದಿದ್ದರು. ಇದೀಗ ಆ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry