ಸೀರೆಗೆ ಸಮಕಾಲೀನ ಡಿಸೈನ್

7

ಸೀರೆಗೆ ಸಮಕಾಲೀನ ಡಿಸೈನ್

Published:
Updated:
ಸೀರೆಗೆ ಸಮಕಾಲೀನ ಡಿಸೈನ್

ಹಸಿರು, ನೀಲಿ, ಕೆಂಪು, ಕಪ್ಪು, ನೇರಳೆ... ಕಾಮನಬಿಲ್ಲು ನಾಚಿಸುವ ವರ್ಣವೈಭವ. ಆ ಮೃದುವಾದ, ಮಿನುಗುವ ಸೀರೆಗಳ ಮೇಲೆಲ್ಲ ನಾಜೂಕಿನ ವಿನ್ಯಾಸ. ಉಷಾ ಶ್ರೀಧರ್ ವಸ್ತ್ರ ಪ್ರದರ್ಶನದ ದೃಶ್ಯವಿದು.ಚೆನ್ನೈನ ವಸ್ತ್ರ ವಿನ್ಯಾಸಗಾರ್ತಿ ಉಷಾ ಸಾಂಪ್ರದಾಯಿಕ ಸೀರೆಯಲ್ಲೂ ಸಮಕಾಲೀನ ವಿನ್ಯಾಸ ರೂಪಿಸುವಲ್ಲಿ ಸಿದ್ಧಹಸ್ತರು. ಆಧುನಿಕ ಮಹಿಳೆಯರ ಮನಮೆಚ್ಚಿಸುವಂತೆ ತಿಳಿ ವರ್ಣದ ಸೀರೆ, ಸೀರೆಯ ಒಡಲು, ಅಂಚು ಎಲ್ಲದರಲ್ಲೂ ನವೀನ ಪರಿಕಲ್ಪನೆ ರೂಪಿಸುತ್ತಾರೆ.ಶ್ರಾವಣದ ಬೆನ್ನಲ್ಲೇ ಶುರುವಾದ ಹಬ್ಬಗಳ ಋತುವಿನ ಸಂಭ್ರಮ ಹೆಚ್ಚಿಸುವಂತೆ ಅವರು ನಗರದಲ್ಲಿ `ವರಮಹಾಲಕ್ಷ್ಮಿ ಮತ್ತು ಗೌರಿ ಗಣೇಶ~ ವಸ್ತ್ರ ಪ್ರದರ್ಶನ ಏರ್ಪಡಿಸಿದ್ದಾರೆ. ರೇಷ್ಮೆ ಸೀರೆಯ ಮೇಲೆ ಕಲಂಕಾರಿ ವಸ್ತ್ರದಲ್ಲಿ ಮಾಡಿದ ಅಪ್ಲಿಕ್ ವರ್ಕ್ ಈ ಬಾರಿಯ ಪ್ರದರ್ಶನದ ಹೈಲೈಟ್.ಅದರ ಜೊತೆ ಹೈಕಾಲರ್, ಕ್ಲೋಸ್‌ನೆಕ್, ಡೀಪ್ ಕಟ್ ನೆಕ್‌ನ ವಿಭಿನ್ನ ವಿನ್ಯಾಸ, ವರ್ಣದ ಬ್ಲೌಸ್‌ಗಳು ಸಿಲ್ಕ್, ಪಾಲಿಕಾಟ್, ಸಿಲ್ಕ್ ಕಾಟನ್, ಹ್ಯಾಂಡ್‌ಲೂಮ್ ವಸ್ತ್ರಗಳಲ್ಲಿ ಲಭ್ಯ.ಕಾಲೇಜು ಯುವತಿಯರು, ಉದ್ಯೋಗಸ್ಥ ಮಹಿಳೆಯರ ಮನ ಮೆಚ್ಚಿಸುವಂತೆ ಸಲ್ವಾರ್, ಕುರ್ತಾಗಳಲ್ಲಿ ವೈವಿಧ್ಯಮಯ ಆಯ್ಕೆಯ ಅವಕಾಶ ಕಲ್ಪಿಸಿದ್ದಾರೆ. ಮಗ್ಗದಿಂದ ನೇರವಾಗಿ ತರಿಸಲಾದ ಪ್ಲೇನ್ ಕಂಚಿ ಸಿಲ್ಕ್ ಸೀರೆಗಳು ಮತ್ತು ಅದಕ್ಕೆ ಒಪ್ಪುವಂತಹ ಬಹುವರ್ಣದ ಬ್ಲೌಸ್‌ಗಳು ಸಹ ಮಹಿಳೆಯರ ಮನಸೆಳೆಯುವಂತಿವೆ.

 

ಸ್ಥಳ: ಕೆನರಾ ಯೂನಿಯನ್, 42, 8ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರ. ಪ್ರದರ್ಶನ ಗುರುವಾರದಿಂದ ಭಾನುವಾರ ವರೆಗೆ (ಆ. 4 ರಿಂದ 7). 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry