ಭಾನುವಾರ, ಡಿಸೆಂಬರ್ 15, 2019
18 °C

ಸೀರೆಯಲ್ಲಿ ಮತ್ತೆ ಮಿಂಚಿದ ಓಫ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀರೆಯಲ್ಲಿ ಮತ್ತೆ ಮಿಂಚಿದ ಓಫ್ರಾ

ಮುಂಬೈ (ಪಿಟಿಐ): ಓಫ್ರಾ ವಿನ್‌ಫ್ರೆ ಯಾರಿಗೆ ತಾನೇ ಗೊತ್ತಿಲ್ಲ. ಅಮೆರಿಕದ ಈ ಪ್ರಖ್ಯಾತ `ಟಾಕ್ ಶೋ~ ನಿರೂಪಕಿ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ. ಅವರು ಹೋದಲ್ಲೆಲ್ಲ ಮಾಧ್ಯಮದ ಕಣ್ಣು ಅವರನ್ನು ಹಿಂಬಾಲಿಸುತ್ತಿರುತ್ತದೆ.ಎರಡು ದಿನಗಳ ಹಿಂದಷ್ಟೇ ಪರಮೇಶ್ವರ್ ಗೋದ್ರೆಜ್ ಏರ್ಪಡಿಸಿದ್ದ ಔತಣಕೂಟದಲ್ಲಿ ಸೀರೆಯಲ್ಲಿ ಪ್ರತ್ಯಕ್ಷರಾಗಿದ್ದ ಓಫ್ರಾ, ಗುರುವಾರ ಸಹ ಭಾರತೀಯರ ಸಾಂಪ್ರದಾಯಿಕ ಉಡುಪಾದ ಸೀರೆ ಸುತ್ತಿಕೊಂಡು ಮುಂಬೈನಲ್ಲಿ ಮಿಂಚಿದರು.ಹೊಂಬಣ್ಣದ ಸೀರೆ ಉಟ್ಟಿದ್ದ ಅವರು ವಸ್ತ್ರ ವಿನ್ಯಾಸಗಾರ ಸವ್ಯಸಾಚಿ ಮುಖರ್ಜಿ ಅವರ ಸ್ಟುಡಿಯೋಗೆ ಭೇಟಿ ನೀಡಿ ಒಂದಿಷ್ಟು ಫ್ಯಾಷನ್ ಸಾಮಗ್ರಿ ಖರೀದಿಸಿದರು.ಅವರ ಸೀರೆ ಪ್ರೀತಿ ಇಲ್ಲಿಗೆ ಮುಗಿದಿಲ್ಲ. ಈ ವಾರಾಂತ್ಯದಲ್ಲಿ ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಲಿರುವ ಒಫ್ರಾ ಅಲ್ಲಿ ಸಹ ಸೀರೆ ತೊಡಲಿದ್ದಾರೆ. ಅಂದಹಾಗೆ ಸವ್ಯಸಾಚಿ ಅವರಿಗೆಂದೇ ವಿಶೇಷ ಸೀರೆಯನ್ನೂ ಸಿದ್ಧಪಡಿಸಿದ್ದಾರಂತೆ...!

ಪ್ರತಿಕ್ರಿಯಿಸಿ (+)