ಶುಕ್ರವಾರ, ಮಾರ್ಚ್ 5, 2021
27 °C

ಸೀರೆ ಖರೀದಿಸಿದ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀರೆ ಖರೀದಿಸಿದ ಮುಖ್ಯಮಂತ್ರಿ

ದಾವಣಗೆರೆ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ನಗರದಲ್ಲಿ ನೂತನವಾಗಿ ಆರಂಭಿಸಿರುವ ‘ಮೈಸೂರು ಸಿಲ್ಕ್‌ ಸೀರೆಗಳ ಮಾರಾಟ ಮಳಿಗೆ’ಯನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ, ಮಳಿಗೆಯಲ್ಲಿ ಮೊದಲ ರೇಷ್ಮೆ ಸೀರೆ ಖರೀದಿಸಿದರು.ಟೇಪ್‌ ಕತ್ತರಿಸಿ ಮಳಿಗೆಯಲ್ಲಿ ಜೋಡಿಸಿದ್ದ ರೇಷ್ಮೆ ಸೀರೆಗಳತ್ತ ಕಣ್ಣು ಹಾಯಿಸಿದರು. ಆಗ ಮಳಿಗೆಯ ಸಿಬ್ಬಂದಿ ‘ಆರೇಂಜ್‌’ ಬಣ್ಣವುಳ್ಳ ₹1.9ಲಕ್ಷ ಮೊತ್ತದ ಸೀರೆ ತೋರಿಸಿದರು.‘ರಾಜ್ಯದ ವಿವಿಧೆಡೆ ಕೆಎಸ್‌ಐಸಿಯ ಸಾಕಷ್ಟು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದ್ದೇನೆ. ಎಲ್ಲಿಯೂ ಸೀರೆ ಖರೀದಿಸಿರಲಿಲ್ಲ. ಮೊದಲ ಬಾರಿ ಸೀರೆ ಖರೀದಿ ಮಾಡುತ್ತಿರುವೆ. ಈ ಸೀರೆಯನ್ನು ಪ್ಯಾಕ್‌ ಮಾಡಿ, ಬಿಲ್‌ ಕೊಡಿ’ ಎಂದು ಮಳಿಗೆಯ ಸಿಬ್ಬಂದಿಗೆ ತಿಳಿಸಿದರು.ಮಳಿಗೆಯ ಸಿಬ್ಬಂದಿ ‘ಕರ್ನಾಟಕ ಸಿಎಂ’ ಹೆಸರಿನಲ್ಲಿ ಶೇ 25 ರಿಯಾಯಿತಿ ನೀಡಿ  ₹ 82 ಸಾವಿರಕ್ಕೆ ಬಿಲ್‌ ಹಾಕಿದರು. ಜೊತೆಗಿದ್ದ ಶಾಸಕ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು ಕಾರಿನಲ್ಲಿ ಸೀರೆ ಇಡುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಹೊರಡುವ ವೇಳೆಗೆ ನಿಗಮದ ಸಿಬ್ಬಂದಿಯನ್ನು ಕರೆದ ಮುಖ್ಯಮಂತ್ರಿ, ‘ಬೆಂಗಳೂರಿಗೆ ಬರುವಾಗ ಬಿಲ್‌ ತೆಗೆದುಕೊಂಡು ಬನ್ನಿ; ಹಣ ಪಾವತಿ ಮಾಡುತ್ತೇನೆ’ ಎಂದು ಹೇಳಿ ಮುಖ್ಯಮಂತ್ರಿಗಳು ಹೊರಟರು.‘ದಾವಣಗೆರೆ ಮಾರಾಟ ಮಳಿಗೆಯಲ್ಲಿದ್ದ ಹೆಚ್ಚಿನ ಮುಖಬೆಲೆಯ ರೇಷ್ಮೆ ಸೀರೆಯೊಂದನ್ನು ಸಿದ್ದರಾಮಯ್ಯ ಅವರು ಖರೀದಿಸಿದರು. ಅದು ಶೇ 65 ಬೆಳ್ಳಿ, ಶೇ 0.65 ಚಿನ್ನ ಲೇಪಿತ ಸೀರೆ’ ಎಂದು ಸಿಬ್ಬಂದಿ ವಿವರ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.