ಸೀರೆ, ಲಂಗ...`ಲೆಹಂಗಾ'

7

ಸೀರೆ, ಲಂಗ...`ಲೆಹಂಗಾ'

Published:
Updated:

ಸೀರೆ ಅಂದ್ಕೊಂಡ್ರೆ ಸೀರೆ; ಲಂಗ ಅಂದ್ಕೊಂಡ್ರೆ ಲಂಗ. ಘಾಗ್ರಾಚೋಲಿ ಅಂದ್ಕೊಂಡ್ರೆ ಅದೇ. ಹೆಸರು `ಲೆಹಂಗಾ'...ಸೀರೆಯ ಮುಂದೆ ಎಲ್ಲ ಉಡುಪುಗಳೂ ಗೌಣ ಅನ್ನೋ ಸತ್ಯ ಮಹಿಳೆಯರಿಗೂ ಗೊತ್ತು. ಸೀರೆ ಆಕೆಯ ಸೌಂದರ್ಯ ಇಮ್ಮಡಿಗೊಳಿಸುವುದು ಮಾತ್ರವಲ್ಲದೇ ಗ್ಲಾಮರಸ್ ಲುಕ್ ಕೂಡಾ ನೀಡುತ್ತದೆ. ಯಾವುದೇ ಶುಭ ಸಮಾರಂಭವಿದ್ದರೂ ಸೀರೆಯದ್ದೇ ಕಾರುಬಾರು!ಆದರೀಗ ಸೀರೇ ಬೇಕು, ಕಷ್ಟಪಟ್ಟು ಉಟ್ಟುಕೊಳ್ಳುವಂತೆ ಇರಬಾರದು ಎಂದುಕೊಂಡವರ ಪಾಲಿಗೆ `ಲೆಹಂಗಾ' ವರದಾನ.ಈಗ ಎಲ್ಲವೂ ರೆಡಿಮೇಡ್ ಬಯಸುವ ಯುಗ. ಸೀರೆಯಂತೆ ಲೆಹಂಗಾ ಕೂಡ ಸುಮಾರು 5 ಅಡಿ ಉದ್ದವಾಗಿ ಇರುತ್ತದೆ. ಆದರೆ ಇದಕ್ಕೆ ನೆರಿಗೆಯ ಅಗತ್ಯ ಇಲ್ಲ. ನೆಟ್ ಸ್ಯಾರಿಯಂತೆ ವಿನ್ಯಾಸಗೊಳಿಸಲಾಗಿದೆ. ಆಕರ್ಷಕವಾಗಿ ಕಾಣಿಸುವುದು ಇದೇ ಕಾರಣಕ್ಕೆ. ಘಾಗ್ರಾ ಬದಿಗೊಂದು ಜಿಪ್ ಅಳವಡಿಸಿದಂತೆ ಅನಿಸುತ್ತದೆ.ಇದಕ್ಕೆ ಸಾಮಾನ್ಯ ಸೀರೆಯಂತೆ ಮುಂಭಾಗದಲ್ಲಿ ನಿರಿಗೆ ಇರುವುದಿಲ್ಲ. ಸೀರೆಗೆ ನಿರಿಗೆ ಇದ್ದರೇನೇ ಚೆನ್ನ. ಆದರೆ ಇವುಗಳಿಗೆ ನಿರಿಗೆ ಇರುವ ಜಾಗದಲ್ಲಿ ಬಗೆಬಗೆ ಕಸೂತಿಯಿಂದ ವಿಧವಿಧ ಡಿಸೈನ್ ಮಾಡಲಾಗಿದೆ. ಲೆಹಂಗಾ ಸೀರೆಗಾಗಿಯೇ ವಿಶೇಷ ಡಿಸೈನ್‌ಗಳನ್ನು ತಯಾರಿಸಲಾಗಿದೆ. ಅವುಗಳ ಪೈಕಿ ಬಾಗ್, ಖಶೀದಾ, ಕಸೂತಿಯಾ, ಕಾಂತ ಪ್ರಮುಖವಾದುದು. ಕೆಂಪು, ಕಪ್ಪು ಬಣ್ಣ, ನೀಲಿ ಬಣ್ಣ, ಚಿನ್ನದ ಬಣ್ಣ ಹೀಗೆ ಹತ್ತು ಹಲವಾರು ಬಣ್ಣಗಳಲ್ಲಿ ಇವು ಲಭ್ಯ. ಗೋಲ್ಡನ್ ಬಣ್ಣದ ಸೆರಗು ಹೊಂದಿರುವ ಕೆಂಪು ಸೀರೆಗೆ ವಿಶೇಷ ಲುಕ್ ಇದೆ. ಇದು ಸೌಂದರ್ಯ ಇಮ್ಮಡಿಗೊಳಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮದುವೆ, ಮುಂಜಿಯಂತಹ ಸಮಾರಂಭಗಳಿಗೆ ಹೇಳಿಮಾಡಿಸಿದಂತಹ ಉಡುಪು ಇದು.ಇವರು ಏನಂತಾರೆ?

`ಫ್ಯಾಷನ್ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಇರುತ್ತದೆ. ಫ್ಯಾಷನ್‌ಗೆ ತಕ್ಕಂತೆ ನಾವು ಕೂಡ ನಮ್ಮ ಉಡುಗೆ ತೊಡುಗೆಗಳನ್ನು ಬದಲಾಯಿಸಿಕೊಳ್ಳುತ್ತೇವೆ. ಸೀರೆಯಲ್ಲಿ ಅನೇಕ ರೀತಿಯ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಂಗೀತ ಹೊಮ್ಮಿಸುವ ಸೀರೆಗಳು ಮಾರುಕಟ್ಟೆ ಪ್ರವೇಶಿಸಿವೆ. ಈಗ ಲೆಹಂಗಾ ಸರದಿ. ಇದನ್ನು ಉಟ್ಟರೆ ತುಂಬಾ ಗ್ರ್ಯಾಂಡ್ ಆಗಿ ಕಾಣುವ ಕಾರಣ ಹೆಚ್ಚಿನ ಯುವತಿಯರು ಇದನ್ನು ಇಷ್ಟಪಡುತ್ತಾರೆ' ಎನ್ನುತ್ತಾರೆ ಚಿಕ್ಕಪೇಟೆಯ `ಶ್ರಾವಣಿ ಸಿಲ್ಕ್ಸ್' ಮಾಲೀಕ ಅನಿಲ್ ಕುಮಾರ್.

ಎಲ್ಲ ಪ್ರಮುಖ ಮಳಿಗೆಗಳಲ್ಲೂ ಈ ವಿನ್ಯಾಸದ ಅರ್ಧ ಸೀರೆಯೆನಿಸುವ ಲೆಹೆಂಗಾಗಳು ಲಭ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry