ಸೀಳುತುಟಿ ಚಿಕಿತ್ಸಾ ಶಿಬಿರ

7

ಸೀಳುತುಟಿ ಚಿಕಿತ್ಸಾ ಶಿಬಿರ

Published:
Updated:

ಟ್ರಿನಿಟಿ ಕೇರ್ ಫೌಂಡೇಶನ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶನಿವಾರ (ಅ.20) ಬೆಳಿಗ್ಗೆ 10 ಗಂಟೆಗೆ ಉಚಿತ ಸೀಳುತುಟಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಬಡತನ ರೇಖೆಗಿಂತ ಕೆಳಗಿರುವ ಮಕ್ಕಳು ಹಾಗೂ ವಯಸ್ಕರಿಗೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. ಸೀಳು ತುಟಿ, ಸೀಳು ಅಂಗಳ, ಮೂಗಿನ ಆಕಾರದ ಸಮಸ್ಯೆ, ಮುಖದ ಮೇಲಿನ ದವಡೆ, ಕೆಳಗಿನ ದವಡೆ, ಉಬ್ಬು ಹ್ಲ್ಲಲು  ಮುಂತಾದವುಗಳಿಗೆ ಈ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುವುದು.ಶಿಬಿರದಲ್ಲಿ ನೋಂದಣಿ ಮಾಡಿಸಿದ ಅರ್ಹ ಮಕ್ಕಳಿಗೆ ಹಾಗೂ ವಯಸ್ಕರಿಗೆ ದಾಖಲಾದ ದಿನದಿಂದ ಗುಣಮುಖವಾಗುವವರೆಗೆ ಶಸ್ತ್ರ ಚಿಕಿತ್ಸೆ, ವಸತಿ ಉಚಿತ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಸ್ಥಳ: ಐಕಾನ್ ಆಸ್ಪತ್ರೆ, ಕಾರ್ಪೋರೇಷನ್ ವೃತ್ತ, ಸಂಪಂಗಿರಾಮನಗರ. ಸಂಪರ್ಕಕ್ಕೆ: 98803 94959

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry