ಗುರುವಾರ , ಅಕ್ಟೋಬರ್ 17, 2019
22 °C

ಸೀಳು ತುಟಿ ಶಸ್ತ್ರಚಿಕಿತ್ಸೆ

Published:
Updated:

ಬೆಂಗಳೂರು: ಫ್ರೆಂಡ್ಸ್ ಕ್ಷೇಮಾಭಿವೃದ್ಧಿ ಸಂಸ್ಥೆಯು ನಗರದ ಶೇಷಾದ್ರಿಪುರದಲ್ಲಿರುವ ಡಾ.ಸೋಲಂಕಿ ಕಣ್ಣು ಆಸ್ಪತ್ರೆಯಲ್ಲಿ ಜನವರಿ 22ರಂದು 16ನೇ ವಾರ್ಷಿಕ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ ಹಮ್ಮಿಕೊಂಡಿದೆ.ಸೀಳುತುಟಿ, ಸೀಳು ಮೇಲುದವಡೆ ಹಾಗೂ ಸುಟ್ಟ ಗಾಯದ ಕಲೆಗಳಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಿದೆ. 22ರಂದು ಬೆಳಿಗ್ಗೆ 8.30ಕ್ಕೆ ತಪಾಸಣೆ ಕಾರ್ಯ ಆರಂಭವಾಗಲಿದೆ. ಜ. 23ರಿಂದ ಫೆಬ್ರುವರಿ 1ರವರೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.ಸೀಳುತುಟಿಯ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ತಮ್ಮಂದಿಗೆ ಯಾರನ್ನಾದರೂ ಕಡ್ಡಾಯವಾಗಿ ಕರೆತರಬೇಕು ಎಂದು ಸೂಚಿಸಿದೆ.ವಿಳಾಸ: ಫ್ರೆಂಡ್ಸ್ ಕ್ಷೇಮಾಭಿವೃದ್ಧಿ ಸಂಸ್ಥೆ, ನಂ 155, ಸಾದರ ಪತ್ರಪ್ಪ ರಸ್ತೆ, ಬೆಂಗಳೂರು- 560 002. ಮೊಬೈಲ್ ಸಂಖ್ಯೆ- 9980173477, 9880307780.


 

Post Comments (+)