ಸೋಮವಾರ, ಆಗಸ್ಟ್ 26, 2019
20 °C

ಸುಂಟರ ಗಾಳಿಗೆ ನಲುಗಿದ ಉಪ್ರಳ್ಳಿ, ಹಳಗೇರಿ

Published:
Updated:

ಬೈಂದೂರು: ಬುಧವಾರ ರಾತ್ರಿ ಖಂಬದಕೋಣೆ ಗ್ರಾಮದ ಹಳಗೇರಿ ಮತ್ತು ಉಳ್ಳೂರು ಗ್ರಾಮದ ಉಪ್ರಳ್ಳಿ ಯಲ್ಲಿ ಬೀಸಿದ ಭಾರಿ ಸುಂಟರಗಾಳಿಗೆ ಹಲವು ಮನೆಗಳಿಗೆ ಹಾನಿಯಾ ಗಿರುವುದಲ್ಲದೆ, ನೂರಾರು ಮರಗಳು ಉರುಳಿ ಅಪಾರ ನಷ್ಟ ಸಂಭವಿಸಿದೆ.ರಾತ್ರಿ 11ಗಂಟೆಗೆ ಎದ್ದ ಗಾಳಿ ಒಂದು ದಿಕ್ಕಿನಲ್ಲಿ ಸಾಗಿ ತನಗೆ ಎದುರಾದ ಮರಗಳನ್ನು ಉರುಳಿಸಿತು. ಕೆಲವು ಮನೆಗಳ ಮೇಲೆ ಮರ ಉರುಳಿ ಹಾನಿಯಾದರೆ, ಹಲವೆಡೆ ಮಾಡಿನ ಹೆಂಚುಗಳು ತರಗೆಲೆಗಳಂತೆ ಹಾರಿ ಹೋದವು. ಗಾಳಿಯ ಭರಾಟೆಗೆ ಜನ ನಿದ್ದೆಯಿಂದ ಎಚ್ಚತ್ತು ಭೀತಿಗೊ ಳಗಾದರು. ಹೆಂಚುಗಳು ಹಾರಿ ಹೋದ್ದರಿಂದ ಸೂರು ಕಳೆದುಕೊಂಡು ಕಂಗಾಲಾದರು.ಹಳಗೇರಿಯ ಕಲ್ಗಟಕಿಮನೆ ಗೋಪಾಲಪೂಜಾರಿ, ನಾರಾಯಣ ಬಳೆಗಾರ, ಬೈಲುಮನೆ ಗಣೇಶ ಪೂಜಾರಿ, ಬಚ್ಚು ಪೂಜಾರಿ, ನಾಗಮ್ಮ ಪೂಜಾರಿ, ಲಕ್ಷ್ಮಣ ಪೂಜಾರಿ, ಉಪ್ರಳ್ಳಿಯ ಮಾದಿಹಿತ್ಲು ಪುಟ್ಟು, ಗಿರಿಜಾ ಶೆಟ್ಟಿ, ಕೆಳಾಹೇರೂರು ನಾರಾ ಯಣ ಶೆಟ್ಟಿ ಅವರ ಮನೆಗಳ ಸೂರಿಗೆ ತೀವ್ರ ಹಾನಿ ಸಂಭವಿಸಿದೆ. ಇವರೆಲ್ಲರ ಮನೆ ಬಳಿಯ ತೆಂಗು, ಅಡಿಕೆ, ಮಾವಿನ ಮರಗಳು ಉರುಳಿ ಗಣನೀಯ ನಷ್ಟವಾಗಿದೆ.ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಬಾಬು ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ವಿಶೇಷ ತಹಶೀಲ್ದಾರ್ ಎಂ. ಎ. ಖಾನ್, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾ ರಿಗಳು ಭೇಟಿ ನೀಡಿ ಪರಿಶೀಲಿಸಿದರು.

Post Comments (+)