ಶುಕ್ರವಾರ, ನವೆಂಬರ್ 22, 2019
22 °C

ಸುಂಡೆಕೆರೆ ಅಕ್ರಮ ಸಂಪರ್ಕ: ಪೈಪು ವಶ

Published:
Updated:

ಮೂಡಿಗೆರೆ: ಪಟ್ಟಣದ ಸುಂಡೆಕೆರೆ ಹಳ್ಳಕ್ಕೆ ಅಕ್ರಮವಾಗಿ ನೀರಿಗಾಗಿ ಸಂಪರ್ಕ ಕಲ್ಪಿಸಿಕೊಂಡಿದ್ದ ಮೋಟಾರಿನ ಪೈಪುಗಳನ್ನು ಮಂಗಳವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ನೇತೃತ್ವದಲ್ಲಿ ಮಂಗಳವಾರ ವಶಪಡಿಸಿಕೊಂಡ ಘಟನೆ ನಡೆಯಿತು.ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಮನೆಗಳಿಗೆ ಕುಡಿಯುವ ನೀರನ್ನು ಕಲ್ಪಿಸಿಕೊಡುವ ಸುಂಡೆಕೆರೆ ಹಳ್ಳಕ್ಕೆ, ಮಳೆ ಕೈಕೊಟ್ಟಿರುವುದರಿಂದ ಹತ್ತಾರು ರೈತರು ಪಂಪ್‌ಸೆಟ್‌ಗಳನ್ನು ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡಿರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ, ಮುಖ್ಯಾಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಾಲ್ಕು ಕಡೆಗಳಲ್ಲಿ ಸಂಪಕ ಪಡೆದ ದೃಶ್ಯ ಕಂಡು ಬಂದಿತು.ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಸಂಪರ್ಕ ಕಡಿತಗೊಳಿಸಿ, ಸಂಪರ್ಕಕ್ಕೆ ಬಳಸಿದ್ದ ಪೈಪುಗಳನ್ನು ತಮ್ಮ ವಶಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)