ಶನಿವಾರ, ಮಾರ್ಚ್ 6, 2021
28 °C

ಸುಖ ನಿದ್ರೆಗೆ 12 ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಖ ನಿದ್ರೆಗೆ 12 ಸೂತ್ರ

-ಬೇಗ ಮಲಗಿ ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಶಾಲಾ ದಿನಗಳ ಮತ್ತು ರಜಾ ದಿನಗಳ ಮಲಗುವ ಹಾಗೂ ಎಚ್ಚರಗೊಳ್ಳುವ ವೇಳೆಯಲ್ಲಿ ಒಂದು ಗಂಟೆಗಿಂತಲೂ ಹೆಚ್ಚಿನ ಅಂತರ ಇರಬಾರದು.-ವಾರಾಂತ್ಯದ ದಿನಗಳಲ್ಲಿ ಹೆಚ್ಚು ಮಲಗುವ ಅಭ್ಯಾಸ ಒಳ್ಳೆಯದಲ್ಲ.-ಒಂದು ಕಿರು ನಿದ್ರೆಗೆ ಜಾರುವಿರಾದರೆ ಅದು ಒಂದು ಗಂಟೆಗಿಂತಲೂ ಅಧಿಕವಾಗಿರಬಾರದು ಮತ್ತು ಅದಕ್ಕೆ ಮಧ್ಯಾಹ್ನ ಸೂಕ್ತ ಸಮಯ.-ಪ್ರತಿ ನಿತ್ಯ ಸೂರ್ಯನ ಕಿರಣಗಳಿಗೆ ದೇಹವನ್ನು ಒಡ್ಡಿಕೊಳ್ಳಿ. ಇದು ಜೈವಿಕ ಗಡಿಯಾರವನ್ನು ಚಾಲನೆಯಲ್ಲಿಟ್ಟಿರಲು ಸಹಕಾರಿ.-ಪ್ರತಿ ನಿತ್ಯ ವ್ಯಾಯಾಮವನ್ನು ರೂಢಿಸಿಕೊಳ್ಳಿ. ಇದರಿಂದ ರಾತ್ರಿ ಅನಾಯಾಸವಾಗಿ ನಿದ್ರೆಗೆ ಜಾರುವಿರಿ ಮತ್ತು ಸುಖಕರ ನಿದ್ರೆ ಹೊಂದುವಿರಿ.-ಮಲಗುವ ಹಾಸಿಗೆಯು ನಿದ್ರೆಗಲ್ಲದೆ ಓದುವುದು, ಟಿ.ವಿ ನೋಡುವುದು ಮುಂತಾದ ಯಾವ ಚಟುವಟಿಕೆಗೂ ಬಳಕೆಯಾಗಬಾರದು.-ಮಲಗುವ ಮುಂಚಿನ ಒಂದು ಗಂಟೆಯ ಅವಧಿಯಲ್ಲಿ ಮನಸ್ಸು ನಿರಾಳವಾಗಿರಬೇಕು. ಇಷ್ಟವಾದ ಪುಸ್ತಕ ಓದುವುದು, ಸಂಗೀತ ಕೇಳುವುದು ಮುಂತಾದ ಕ್ರಿಯೆಗಳಿಂದ ಮನಸ್ಸಿಗೂ, ದೇಹಕ್ಕೂ ಆರಾಮವೆನಿಸಿ ಸುಲಭವಾಗಿ ನಿದ್ರೆಗೆ ಜಾರುವಿರಿ. ಮಲಗುವ ಮುನ್ನ ಭಯ ಉಂಟು ಮಾಡುವ ಚಲನಚಿತ್ರ ವೀಕ್ಷಿಸಬಾರದು ಮತ್ತು ಭಯ ಕೆರಳಿಸುವ ಪುಸ್ತಕ ಓದಬಾರದು. ಹಾಗೆಯೇ ಅಧಿಕ ಶಕ್ತಿ ವ್ಯಯವಾಗುವಂಥ ಶ್ರಮದಾಯಕ ಕೆಲಸ ಮತ್ತು ವ್ಯಾಯಾಮ ಸಹ ಒಳ್ಳೆಯದಲ್ಲ.-ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಹೊಟ್ಟೆ ಬಿರಿಯುವಂತೆ ತಿನ್ನುವುದಕ್ಕಿಂತ ಮಿತಾಹಾರ ಸೇವನೆ ಒಳ್ಳೆಯದು.-ಮಲಗುವ ಮುನ್ನ ಕಾಫಿ, ಟೀ ಮತ್ತು ಕೆಫೀನ್‌ಭರಿತ ಚಾಕೊಲೇಟ್‌ಗಳ ಸೇವನೆ ಒಳ್ಳೆಯದಲ್ಲ.-ಮದ್ಯಪಾನದಿಂದ ದೂರ ಇರಬೇಕು. ಆಲ್ಕೋಹಾಲ್ ನಿದ್ರೆಯಿಂದ ಆಗಾಗ ಎಚ್ಚರಗೊಳ್ಳುವಂತೆ ಮಾಡುತ್ತದೆ.-ಧೂಮಪಾನ ನಿಮ್ಮ ನಿದ್ರೆಯನ್ನು ಹಾಳುಗೆಡಹುತ್ತದೆ; ಆದ್ದರಿಂದ ದೂರವಿರಿ.-ವೈದ್ಯರ ಸಲಹೆಯಿಲ್ಲದೆ ಮತ್ತು ವಿನಾಕಾರಣ ನಿದ್ರೆ ಮಾತ್ರೆಗಳನ್ನು ಎಂದಿಗೂ ಬಳಸಬಾರದು. ಅವು ಶರೀರಕ್ಕೆ ಅಪಾಯಕಾರಿ ಅಷ್ಟೇ ಅಲ್ಲ, ನಿಲ್ಲಿಸಿದ ನಂತರ ನಿದ್ರಾ ಸಮಸ್ಯೆಗೂ ಈಡು ಮಾಡುತ್ತವೆ.ಮೇಲಿನ ಹನ್ನೆರಡು ಸೂತ್ರಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಸುಖಕರ ಗಾಢ ನಿದ್ರೆ ನಿಮ್ಮದಾಗುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.