ಸೋಮವಾರ, ಮೇ 16, 2022
30 °C

ಸುಗಮ ಸಂಗೀತ ಸುದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟವು ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ `ಸುಗಮ ಸಂಗೀತ ಸುದಿನ~ ಕಾರ್ಯಕ್ರಮ ಆಯೋಜಿಸಿತ್ತು.ನಂತರ ಬಿ.ಆರ್. ಲಕ್ಷ್ಮಣರಾವ್ ರಚನೆಯ ಕವಿತೆಗಳ ಗಾಯನ ಪ್ರಸ್ತುತಿ ಇತ್ತು. ಡಾ. ವೆಂಕಟೇಶಮೂರ್ತಿ ಮಾತನಾಡಿ ಬಿಎಂಶ್ರೀ, ಬೇಂದ್ರೆ, ನರಸಿಂಹಸ್ವಾಮಿ ಇವರ ನಂತರ ಕವಿತೆಗಳಲ್ಲಿ ಪ್ರೀತಿಯನ್ನು ವಸ್ತು ವಿಷಯವನ್ನಾಗಿಸಿಕೊಂಡ ಕವಿ ಲಕ್ಷ್ಮಣರಾವ್ ಎಂದರು. ಆದರೆ ಅವರ ಜಾಡಿನಲ್ಲಿ ಸಾಗದೆ ವಿಭಿನ್ನವಾಗಿ ಆಲೋಚಿಸುವ ಪರಿ ಅವರ ಸಾಹಿತ್ಯ ಕೃಷಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.ವಿಜಯ ಹಾವನೂರು, ಆನಂದ ಮಾದಲಗೆರೆ, ಶಮಿತಾ ಮಲ್ನಾಡ್, ಗೀತಾ ಸತ್ಯಮೂರ್ತಿ, ಮೃತ್ಯುಂಜಯ ದೊಡ್ಡವಾಡ, ನರಹರಿ ದೀಕ್ಷಿತ್, ಜೋಸೆಫ್ ಹೆರಾನಿಮಾಸ್ ಅವರು ಬಿಆರ್‌ಎಲ್ ರಚಿತ ಕವಿತೆಗನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರಿಗೆ ಮುದ ನೀಡಿದರು.ನವನೀತ ಕೃಷ್ಣ (ಕೀಬೋರ್ಡ್), ಪ್ರಕಾಶ್ ಹೆಗಡೆ (ಕೊಳಲು), ಪ್ರೀತಂ ಹಳಿಬಂಡಿ (ತಬಲಾ), ಕೃಷ್ಣ (ರಿದಂಪ್ಯಾಡ್) ವಾದ್ಯ ಸಹಕಾರ ನೀಡಿದರು.ಜನ್ಮದಿನದ ನಿಮಿತ್ತ ಲಕ್ಷ್ಮಣರಾವ್ ಲಕ್ಷ್ಮಣರಾವ್ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.