ಬುಧವಾರ, ಜೂನ್ 23, 2021
30 °C

ಸುಗಮ ಸಂಚಾರಕ್ಕೆ ಅನುಕೂಲವಾಗಲಿ

ಜಕ್ಕೂರು ಎಸ್. ನಾಗರಾಜು Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಹೆದ್ದಾರಿ 7ರ ಜಿ.ಕೆ.ವಿ.ಕೆ. ಕ್ರಾಸ್‌ನಿಂದ ಕೊತ್ತನೂರು, ಬಾಗಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಹುತೇಕ ಜೋಡಿ ರಸ್ತೆಯಾಗಿದೆ. ಜಕ್ಕೂರು ಬಡಾವಣೆಯ ಶನಿದೇವರ ದೇವಾಲಯದ ಸಮೀಪ ಇದ್ದ ಅತಿ ಕಿರಿದಾದ ತಿರುವನ್ನು ವಿಸ್ತರಿಸಿ ಬೃಹತ್ ಮೋರಿ ನಿರ್ಮಾಣ ಮಾಡಲಾಯಿತು. ಮೋರಿ ಕೆಲಸ ಮುಗಿದು ವರ್ಷವಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದೆ ಈ ಮೋರಿಯ ಮೇಲೆ ಅಲ್ಪ ಸ್ವಲ್ಪ ಮಣ್ಣನ್ನು ಹಾಕಿದ್ದಾರೆ. ರಸ್ತೆಯ ಮಧ್ಯದಲ್ಲೇ ದ್ವಿಚಕ್ರ ವಾಹನ ಸವಾರರಿಗೆ ಯಮ ಸ್ವರೂಪಿಯಾಗಿರುವ ಕಬ್ಬಿಣದ ಸರಳು ಜೀವತೆಗೆಯುವಂತೆ ನೆಟ್ಟಗೆ ನಿಂತಿವೆ.

ಈ ರಸ್ತೆ ಮತ್ತು ಮೋರಿ ವಿಸ್ತಾರವಾಗಿದ್ದರೂ ಮೋರಿಯ ಮೇಲೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡದಿದ್ದುದರಿಂದ ಇಲ್ಲಿ ಮಾತ್ರ ರಸ್ತೆ ಮತ್ತು ಮೋರಿ ಮೊದಲಿಗಿಂತಲೂ ಕಿರಿದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಬೇಕಾದ ಕಾಮಗಾರಿಗಳೇ ಸಂಚಕಾರವಾದರೆ ಹೇಗೆ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.