ಸೋಮವಾರ, ಮೇ 17, 2021
22 °C

ಸುಗೂರ: ಗಂಗಾದೇವಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಗಂಗಾ ಜಯಂತ್ಯುತ್ಸವದ ಅಂಗವಾಗಿ ಸುಗೂರ ಗ್ರಾಮದಲ್ಲಿ ಮಂಗಳವಾರ ಗಂಗಾದೇವಿ ಉತ್ಸವ ಜರುಗಿತು. ಜೂನ್ 8ರಿಂದ 19ರ ಬುಧವಾರ ತನಕ ನಡೆದ ಕಾರ್ಯಕ್ರಮದಲ್ಲಿ ಪುಷ್ಕರಣೀಯ ಪೂಜೆ, ಹೋಮ, ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಕೈಗೊಳ್ಳಲಾಯಿತು.ಗಂಗಾದೇವಿಯ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಂಗನಾಥ ಮಹಾರಾಜ ಆಶ್ರಮಕ್ಕೆ ತೆರಳಿತು. ಸುಮಂಗಲೆಯರ ಕುಂಭ ಕಳಸ, ಭಜನಾ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿದ್ದವು. ನಂತರ ಪ್ರಸಾದ ವಿತರಣೆ ನಡೆಯಿತು.ಹಿರೇಮಠದ ಪೂಜ್ಯ ಶಿವಾನಂದ ಸ್ವಾಮೀಜಿ, ವೆಂಕಟೇಶ್ವರ ದೇವಸ್ಥಾನದ ಕೃಷ್ಣದಾಸ ಮಹಾರಾಜ, ಗಂಗಾದೇವಿ ಟ್ರಸ್ಟಿನ ಅಧ್ಯಕ್ಷ ಸಿದ್ದು ಕೇಶ್ವರ, ನಾಗಪ್ಪ ಪಂಗರಗಿ, ಸಿದ್ದಪ್ಪ ಕೇಶ್ವರ, ಗೋವಿಂದ ಚಿಂತಪಳ್ಳಿ, ದೇವಿಂದ್ರ ಚಿಂತಪಳ್ಳಿ, ಘಾಳಪ್ಪ ಹುಣಚಪ್ಪನೋರ, ಪರಮೇಶ್ವರ ಪಾಟೀಲ, ಚಂದ್ರಕಾಂತ ರೆಮಣಿ, ಸಂಜು ರಾಠೋಡ, ಖೇಮು ರಾಠೋಡ, ಪ್ರಕಾಶ ರಾಠೋಡ, ಜಗಪ್ಪ ಕುಡ್ಡಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.