ಗುರುವಾರ , ಜೂನ್ 24, 2021
24 °C

ಸುಗ್ಗಿ ಹಬ್ಬ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ: ಕಳೆದ ಒಂದು ವಾರದಿಂದ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸುಗ್ಗಿ ಹಬ್ಬಕ್ಕೆ ಮಂಗಳವಾರ ಶಿರೂರು ಗ್ರಾಮದ ಹಳ್ಳದಲ್ಲಿ ಸಾಮೂಹಿಕವಾಗಿ ಮೀನು ಹಿಡಿಯುವ ಮೂಲಕ ತೆರೆ ಎಳೆಯಲಾಯಿತು.ಸೋಮವಾರ ಸಂಜೆ ಸುಗ್ಗಿ ಹಬ್ಬದ ನಿಮಿತ್ತ ತಾಲ್ಲೂಕಿನ ಬೆಳಂಬಾರದಲ್ಲಿ ಕರಿ ದೇವರ ಕಳಸದ ಮೆರವಣಿಗೆ ನಡೆಯಿತು. ಕಳಸದ ಜೊತೆಗೆ ನೂರಾರು ಕರಿ ಮಕ್ಕಳು ಕೆಂಪು ಬಾವುಟವನ್ನು ಹಿಡಿದು ‘ಹೋ ಹೋ ಕರಿಯ’ ಎಂದು ಕೂಗುತ್ತ ಓಡಿಬರುವ ಕ್ಷಣವು ಯುದ್ಧದ ಸನ್ನಿವೇಶದಂತೆ ಕಂಡುಬಂತು. ನಂತರ ಅಗ್ನಿಕುಂಡಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಈ ವರ್ಷದ ಸುಗ್ಗಿ ಹಬ್ಬವನ್ನು ಮುಕ್ತಾಯಗೊಳಿಸಿದರು.ಈ ಸಂದರ್ಭದಲ್ಲಿ ಹಾಲಕ್ಕಿ ಸಮಾಜ ದವರಿಂದ ಆಕರ್ಷಕ ಹಗಣ ಪ್ರದರ್ಶನ ಗೊಂಡವು.  ಬೆಳಂಬಾರ ಊರ ಗೌಡ ರಾದ ಷಣ್ಮುಖ ಗೌಡ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಪ್ರಮುಖ ರಾದ ಗೋವಿಂದ ಗೌಡ, ಈಶ್ವರ ಗೌಡ, ಚಾರುದತ್ ಗೌಡ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.