ಶುಕ್ರವಾರ, ಮಾರ್ಚ್ 5, 2021
30 °C

ಸುಗ್ಗಿ-–ಹುಗ್ಗಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಗ್ಗಿ-–ಹುಗ್ಗಿ ಸಂಭ್ರಮ

ಮುಳಬಾಗಲು: ಭಾರತ ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈತಿಕತೆಯ ದಿವಾಳಿತನ ಅನುಭವಿಸುತ್ತಿದೆ ಎಂದು ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್‌ದಾಸ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸುಗ್ಗಿ-ಹುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.‘ಮುಂಜಾನೆ ಎದ್ದು ಯಾರ್‍ಯಾರ ನೆನೆಯಲಿ ಎಳ್ಳು, ಜೀರಿಗೆ’ ಎಂಬ ಜಾನಪದ ಹಾಡು ಇಂದು ಎಲ್ಲರ ಮನಸ್ಸಿನಿಂದ ದೂರ ಉಳಿದಿರುವುದು ವಿಷಾದದ ಸಂಗತಿ. ಹಳ್ಳಿಗಳಲ್ಲಿ ಬೆಳಿಗ್ಗೆ ಎದ್ದು ಗಂಜಲ, ಸಗಣಿ ನೀರಿನಿಂದ ಸಾರಿಸಿ ರಂಗೋಲಿ ಬಿಡಿಸಿ ಪದಗಳನ್ನು ಹಾಡುತ್ತಿದ್ದರು. ಇಂದು ಅವ್ಯಾವೂ ನಮಗೆ ಕಾಣಸಿಗುತ್ತಿಲ್ಲ ಎಂದು ವಿಷಾದಿಸಿದರು.ಹೊಲ ಹಸನು ಮಾಡುವಾಗ, ಕಳೆ ತೆಗೆಯುವಾಗ, ಗದ್ದೆ ನಾಟಿ-ಕೊಯ್ಲು, ಸಂಜೆಯಾದರೆ ಮಗುವಿಗೆ ತಿಂಡಿ ತಿನ್ನಿಸುವ ವೇಳೆ, ರಾತ್ರಿ ವೇಳೆ ಊರುಗಳಲ್ಲಿ ಕೋಲಾಟ ಪದಗಳನ್ನು ಹಾಡುತ್ತಿದ್ದರು ಎಂಬುದು ಕೇಳಿ ತಿಳಿಯಬಹುದೇ ಹೊರತು ಕಾಣಸಿಗದಿರುವುದು ವಿಪರ್ಯಾಸದ ಸಂಗತಿ ಎಂದರು.ಮಹಿಳೆಯರಿಗೆ ಸಂಕ್ರಾಂತಿ ಹಬ್ಬದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಗುತ್ತಿತ್ತು. ಪುರುಷ ಸಮಾಜದಲ್ಲಿ ನಿತ್ಯ ಬೆಂದು ನಲುಗುತ್ತಿದ್ದ ಮಹಿಳೆ ಸಂಕ್ರಾಂತಿ ಹಬ್ಬದಂದು ಗೊಬ್ಬಿಯಳ್ಳೊ ಪದಗಳಿಂದ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರದರ್ಶಿಸುತ್ತಿದ್ದರು. ‘ಗೊಬ್ಬಿಯಳ್ಳೊ ನಾ ಮೊಗುಡು ನಿ ಮೊಗಡು ದೊಂಗನಾ ಬಟ್ಲು’ ಎಂಬ ತೆಲುಗಿನ ಪದ ಪುರುಷ ಸಮಾಜದ ಮೇಲಿನ ಅಸಡ್ಡೆಯನ್ನು ತೋರಿಸುತ್ತದೆ.ಶ್ರಾವಣ, ಕಾರ್ತೀಕ, ಗಣೇಶ ಹಬ್ಬಗಳನ್ನು ಆಚರಿಸುವ ಬದಲಿಗೆ ತಿನ್ನುವ ಹಬ್ಬಗಳು ಹೆಚ್ಚುತ್ತಿರುವುದರಿಂದ ಜನರು ಆರ್ಥಿಕ ದಿವಾಳಿತನಕ್ಕೆ ಒಳಪಡುತ್ತಿದ್ದಾರೆ. ಆರ್ಥಿಕ, ಸಾಂಸ್ಕೃತಿಕ, ನೈತಿಕ ದಿವಾಳಿ ತನದಿಂದ ಹೊರಬರುವ ಪ್ರಯತ್ನ ಮಾಡಬೇಕಾಗಿದೆ. ಮುಂದಿನ ಜನಾಂಗಕ್ಕೆ ನಮ್ಮ ಹಿಂದಿನ ಕಾಲದ ಆಚಾರ, ವಿಚಾರಗಳನ್ನು ಬಳುವಳಿಯಾಗಿ ನೀಡಬೇಕು ಎಂದು ತಿಳಿಸಿದರು.ಸುಗ್ಗಿ-ಹುಗ್ಗಿ ಜಾನಪದ ಸಂಭ್ರಮದಲ್ಲಿ ಭಾಗವಹಿಸಿದ ವಿವಿಧ ಕಲಾ ತಂಡಗಳು ಹೆಬ್ಬಣಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದವು.ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ್, ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಬಿಇಒ ಎನ್.ದೇವರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಘಟಕ ಅಧ್ಯಕ್ಷ ಕೆ.ವಿ.ಜಗನ್ನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ತಾಲ್ಲೂಕು ಘಟಕ ಅಧ್ಯಕ್ಷ ಎಚ್.ಆನಂದ್,

ಸರ್ಕಾರಿ ಮಹಿಳಾ ಕಾಲೇಜು ಇತಿಹಾಸ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಶಿವಪ್ಪ, ಎಂ.ವಿ.ಜನಾರ್ದನ್, ಮಾಲೂರು ಎ.ಅಶ್ವತ್ಥ್‌, ಪಿಡಿಒ ರಂಗಪ್ಪ, ಪ್ರಗತಿ ಕೃಷ್ಣಾ ಬ್ಯಾಂಕ್ ವ್ಯವಸ್ಥಾಪಕ ಶ್ರೀರಾಮ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈಧ್ಯಾಧಿಕಾರಿ ಎಂ.ವಿ.ಸೀತಾ, ಕನ್ನಡ ಸಾಹಿತ್ಯ ಪರಿಷತು ತಾಲ್ಲೂಕು ಘಟಕ ಅಧ್ಯಕ್ಷ ಇ.ಶ್ರೀನಿವಾಸಗೌಡ, ಹೆಬ್ಬಣಿ ಗ್ರಾಮದ ಮುಖಂಡರಾದ ಎಚ್.ಎನ್.ನಾಗಲಿಂಗಾರೆಡ್ಡಿ, ಸಿದ್ದಯ್ಯಗಾರಿ ರಾಜಪ್ಪ, ವೆಂಕಟಕೃಷ್ಣಾರೆಡ್ಡಿ, ಅಶ್ವತ್ಥ್‌ನಾರಾಯಣರೆಡ್ಡಿ, ಎಚ್.ಎನ್.ವೆಂಕಟರೆಡ್ಡಿ, ಬಿ.ವಿ.ನಾಗಿರೆಡ್ಡಿ, ಟಿ.ವಿ.ರಾಜಗೋಪಾಲ್, ವೇದಾವದಯಾಸಾಚಾರ್, ನಿವೃತ್ತ ಬ್ಯಾಂಕ್ ಅಧಿಕಾರಿ ಚಂಗಪ್ಪ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.