ಬುಧವಾರ, ಜೂನ್ 23, 2021
29 °C
ಇಂದು ಕೇಂದ್ರ ಸಚಿವ ಸಂಪುಟ ಸಭೆ

ಸುಗ್ರೀವಾಜ್ಞೆ ಜಾರಿ ಚರ್ಚೆ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೇಂದ್ರ ಸಚಿವ ಸಂಪುಟ ಭಾನುವಾರ ಸಭೆ ಸೇರಲಿದ್ದು, ಭ್ರಷ್ಟಾಚಾರ ನಿಗ್ರಹ ಮಸೂದೆಗಳ ಕುರಿತು ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ  ಮತ್ತು ಹಕ್ಕುಗಳಿಗೆ ಸಂಬಂಧಿಸಿದ ವಿಷಯ­ಗಳ ಬಗ್ಗೆ ಚರ್ಚಿಸಲಿದೆ.ಶುಕ್ರವಾರ ನಡೆದಿದ್ದ ಸಂಪುಟ ಸಭೆ­ಯಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ನಡೆದಿರಲಿಲ್ಲ. ರಾಹುಲ್‌ ಗಾಂಧಿ ಅವರು ಕಾಳಜಿ ತೋರಿರುವ ಕೆಲವು ಭ್ರಷ್ಟಾಚಾರ ವಿರೋಧಿ ಮಸೂದೆ ಸೇರಿದಂತೆ ಆರು ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಬಗ್ಗೆ ಸರ್ಕಾರ ಮತ್ತೆ ಯೋಚಿಸಿ­ರುವ ಹಿನ್ನೆಲೆ­ಯಲ್ಲಿ ಭಾನು­ವಾರ ಸಂಪುಟ ಸಭೆ ಕರೆಯ­ಲಾಗಿದೆ ಎಂದು ಹೇಳಲಾಗಿದೆ.ಶುಕ್ರವಾರ ನಡೆದ ಸಂಪುಟ ಸಭೆ­ಯಲ್ಲೇ ಈ ವಿಚಾರದ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಆದರೆ, ಕೆಲವು ಹಿರಿಯ ಸಚಿವರು ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಅಧಿಕಾರವಧಿಯ ಕೊನೆ ಹಂತದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅಗತ್ಯತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರಿಂದ ಈ ವಿಷಯವನ್ನು ತಡೆ ಹಿಡಿಯಲಾಗಿತ್ತು ಎನ್ನಲಾಗಿದೆ.ಪ್ರಣವ್‌ ಮುಖರ್ಜಿ ಅವರು ಇದೇ ಪ್ರಶ್ನೆ­ಗಳನ್ನು ಎತ್ತಬಹುದು ಎಂಬ ಸಂಶಯ­­ದಿಂದ ಈ ವಿಚಾರವನ್ನು ಚರ್ಚಿಸಲು ಕೇಂದ್ರ ಸಂಪುಟ ಹಿಂದೇಟು ಹಾಕಿತ್ತು ಎಂದೂ ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.