ಸುಗ್ರೀವಾಜ್ಞೆ: ಸ್ಪಷ್ಟನೆ ಕೇಳಿದ ರಾಷ್ಟ್ರಪತಿ

7

ಸುಗ್ರೀವಾಜ್ಞೆ: ಸ್ಪಷ್ಟನೆ ಕೇಳಿದ ರಾಷ್ಟ್ರಪತಿ

Published:
Updated:
ಸುಗ್ರೀವಾಜ್ಞೆ: ಸ್ಪಷ್ಟನೆ ಕೇಳಿದ ರಾಷ್ಟ್ರಪತಿ

ನವದೆಹಲಿ (ಪಿಟಿಐ): ಕಳಂಕಿತ ಸಂಸದರು ಮತ್ತು ಶಾಸಕರನ್ನು ಅನರ್ಹತೆಯಿಂದ ರಕ್ಷಿಸುವ ಸುಗ್ರೀವಾಜ್ಞೆಯ ಅಗತ್ಯ ಕುರಿತು ತಮ್ಮ

ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಗುರುವಾರ ರಾತ್ರಿ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.



ಎಲ್‌.ಕೆ. ಅಡ್ವಾಣಿ ನೇತೃತ್ವದ ಬಿಜೆಪಿ ಉನ್ನತ ಮಟ್ಟದ ನಾಯಕರ ನಿಯೋಗ ರಾಷ್ಟ್ರಪತಿಯನ್ನು ಭೇಟಿ ಮಾಡಿ ಅನೈತಿಕ ಮತ್ತು ಅಸಂವಿಧಾನಿಕವಾದ ಈ ಸುಗ್ರೀವಾಜ್ಞೆಯನ್ನು ಸರ್ಕಾರಕ್ಕೆ ವಾಪಸ್‌ ಕಳಿಸುವಂತೆ ಆಗ್ರಹಿಸಿತ್ತು.



ಸುಪ್ರೀಂಕೋರ್ಟ್‌ ತೀರ್ಪನ್ನು ನಿರಾಕರಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿಯವರು ಒಪ್ಪಿಗೆ ನೀಡಲೇ ಬೇಕೆಂದಿಲ್ಲ ಎಂದು ಬಿಜೆಪಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಮುಖರ್ಜಿ ಅವರು, ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ಕಾನೂನು ಸಚಿವ ಕಪಿಲ್‌ ಸಿಬಲ್‌ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್‌ ಅವರನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿ ಸುಗ್ರೀವಾಜ್ಞೆ ಕುರಿತು ಸ್ಪಷ್ಟೀಕರಣ ಕೇಳಿದರು.



ಕೇಂದ್ರ ಸಚಿವ ಸಂಪುಟ ಮಂಗಳವಾರ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದ ನಂತರ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಿತ್ತು. ಆದರೆ, ವಿರೋಧ ಪಕ್ಷಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಣವ್‌ ಅವರು ತರಾತುರಿಯಲ್ಲಿ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಹಿಂದೇಟು ಹಾಕುತ್ತಿದ್ದಾರೆ.



ಸುಗ್ರೀವಾಜ್ಞೆಗೆ ಅಂಕಿತ ಹಾಕುವ ಮುನ್ನ ರಾಷ್ಟ್ರಪತಿ ತಜ್ಞರ ಅಭಿಪ್ರಾಯ ಪಡೆಯಬಹುದು. ಒಂದು ವೇಳೆ ಅವರಿಗೆ ಮನವರಿಕೆಯಾಗದಿದ್ದರೆ ಸುಗ್ರೀವಾಜ್ಞೆ ಯನ್ನು ಸರ್ಕಾರಕ್ಕೆ ಮರಳಿ ಕಳಿಸಲೂ ಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry