ಬುಧವಾರ, ನವೆಂಬರ್ 13, 2019
23 °C

ಸುಡಾನ್‌ನಲ್ಲಿ 5 ಭಾರತೀಯ ಯೋಧರ ಹತ್ಯೆ

Published:
Updated:

ನವದೆಹಲಿ (ಐಎಎನ್‌ಎಸ್):  ದಕ್ಷಿಣ ಸುಡಾನ್‌ನ ಜೊಂಗ್ಲೈ ಎಂಬಲ್ಲಿ ಬಂಡುಕೋರರು ಮಂಗಳವಾರ ನಡೆಸಿದ ದಾಳಿಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವರು ಭಾರತೀಯ ಯೋಧರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಯೋಧರ ಶವಗಳನ್ನು ಭಾರತಕ್ಕೆ ತರಲು ಶಾಂತಿಪಾಲನಾ ಪಡೆಯ ಜತೆ ವಿದೇಶಾಂಗ ಸಚಿವಾಲಯ ನಿರಂತರ ಸಂಪರ್ಕದಲ್ಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)