ಸುತ್ತೂರಿನಲ್ಲಿ ಏ.17ರಿಂದ ವೀರಶೈವ ಮಹಾಧಿವೇಶನ

7

ಸುತ್ತೂರಿನಲ್ಲಿ ಏ.17ರಿಂದ ವೀರಶೈವ ಮಹಾಧಿವೇಶನ

Published:
Updated:

ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾದ 22ನೇ ಮಹಾ ಅಧಿವೇಶನವು ಬರುವ ಏಪ್ರಿಲ್ 17ರಿಂದ 19ರವರೆಗೆ ಮೂರು ದಿನಗಳ ಕಾಲ ನಂಜನಗೂಡು ತಾಲ್ಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯಲಿದೆ.

‘ನಾಡಿನ ಹಿರಿಯ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು, ಕಲಾವಿದರು ಹಾಗೂ ಸಮಾಜದ ಗಣ್ಯರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಮಾವೇಶದಲ್ಲಿ ಸಾಮಾನ್ಯ ಅಧಿವೇಶನದ ಜೊತೆಗೆ ದಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಮುಂತಾದ ವಿಷಯಗಳ ಬಗ್ಗೆ ವಿವಿಧ ಗೋಷ್ಠಿಗಳು ಇರುತ್ತವೆ. ಅಲ್ಲದೆ ಅಧಿವೇಶನದ ನೆನಪಿಗಾಗಿ ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದು ಎಂದು ಅಧಿವೇಶನದ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಪಿ.ಮಹಾದೇವಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಧಿವೇಶನದ ಗೌರವ ಅಧ್ಯಕ್ಷರಾಗಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ಹಣಕಾಸು ಸಮಿತಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಸ್ಮರಣ ಸಂಚಿಕೆ ಮತ್ತು ಸಂಪಾದಕ ಮಂಡಳಿ ಅಧ್ಯಕ್ಷರಾಗಿ ಶಾಸಕ ಎಚ್.ಎಸ್.ಮಹದೇವಪ್ರಸಾದ್, ಮಹಾಸಭೆಯ ಉಪಾಧ್ಯಕ್ಷರಾಗಿ ಕೆ.ಎನ್.ಪುಟ್ಟಬುದ್ದಿ ಮತ್ತು ಕಾರ್ಯಾಧ್ಯಕ್ಷರಾಗಿ ಎನ್.ಎಸ್.ಬಸವರಾಜು ಅವರುಗಳು ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಇಚ್ಛಿಸುವವರು ನೋಂದಣಿ ಶುಲ್ಕವನ್ನು ನೇರವಾಗಿ ನಗದು ರೂಪದಲ್ಲಿ ಅಥವಾ ‘ಅಖಿಲ ಭಾರತ ವೀರಶೈವ ಮಹಾಸಭಾ 22ನೇ ಮಹಾ ಅಧಿವೇಶನ’ ಈ ಹೆಸರಿಗೆ ಪತ್ರ ಬರೆದು ಡಿಡಿ ಮೂಲಕ ಹಣ ಕಳುಹಿಸಬಹುದು. ನೋಂದಣಿ ಮಾಡಿಸಲು ಫೆ.28 ಕೊನೆ ದಿನ. ಅಧಿವೇಶನಕ್ಕೆ ರಾಜ್ಯದ ವೀರಶೈವ ಲಿಂಗಾಯಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry