ಶುಕ್ರವಾರ, ಜನವರಿ 24, 2020
21 °C

ಸುತ್ತೂರು ಜಾತ್ರೆ 19ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಧಾರ್ಮಿಕ, ಸಾಂಸ್ಕೃತಿಕ ಉತ್ಸವಗಳ ಸಂಗಮವಾದ ಮೈಸೂರು ಜಿಲ್ಲೆಯ ಸುತ್ತೂರು ಮಠದ ಜಾತ್ರಾ ಮಹೋತ್ಸವ ಜ.19 ರಿಂದ 24 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ~  ಎಂದು ಮಲೆಯೂರು ಗುರುಸ್ವಾಮಿ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸುತ್ತೂರ ಮಠದ ಜಾತ್ರೆ ಕೇವಲ ಧಾರ್ಮಿಕ ಉತ್ಸವದ ಜಾತ್ರೆಯಾಗಿಲ್ಲ. ಅದು ಸಾಂಸ್ಕೃತಿಕ, ಜಾನಪದ, ದನಗಳ ಜಾತ್ರೆ, ವಸ್ತು ಪ್ರದರ್ಶನ, ಭಜನಾಮೇಳ, ರಸಪ್ರಶ್ನೆ, ರಂಗೋಲಿ, ಚಿತ್ರಕಲಾ, ಗಾಳಿಪಟ ಸ್ಪರ್ಧೆಗಳು ನಡೆಯುತ್ತವೆ. ಬೇರೆ ರಾಜ್ಯದ ನೃತ್ಯಕಲಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಪೌರಾಣಿಕ ನಾಟಕಗಳ ಪ್ರದರ್ಶನ ಸಹ ನಡೆಯಲಿದ್ದು, ರಾಜ್ಯದ ಬೇರೆ ಬೇರೆ ಭಾಗದ ಕಲಾವಿದರು ಭಾಗವಹಿಸಲು ಅವಕಾಶವಿದೆ ಎಂದರು.ಕಳೆದ ಹನ್ನೆರಡು ವರ್ಷಗಳಿಂದ ಜಾತ್ರಾ ಮಹೋತ್ಸವದಲ್ಲಿ ಸಾಮೂ ಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ಕೂಡ 2000 ವಧು- ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಸಾರ್ವ ಜನಿಕರ ಅನುಕೂಲಕ್ಕಾಗಿ ವಿಷೇಶ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.ಜಾತ್ರಾಮಹೋತ್ಸವದಲ್ಲಿ ರಾಜ್ಯ ಪಾಲರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳ ಲಿದ್ದಾರೆ ಎಂದ ತಿಳಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ನಡೆ ಯುವ ಕೃಷಿ ಮೇಳದ ಬಗ್ಗೆ ವಿಷಯ ಪ್ರಸ್ತಾಪಿಸಿದ ಡಾ. ಅರುಣ ಬಾಳ ಮಟ್ಟಿ, ಈ ವರ್ಷದ ಕೃಷಿ ಮೇಳದಲ್ಲಿ ಜೈವಿಕ ಕೃಷಿ, ವಸ್ತುಪ್ರದರ್ಶನ, ಕೃಷಿ ಯಂತ್ರೋಪಕರಣ ಹಾಗೂ ಕೃಷಿಗೆ ಸಂಬಂಧಪಟ್ಟ ಮಾಹಿತಿಗಳು ಹಾಗೂ ಸಮಸ್ಯೆಗಳ ಕುರಿತು 5 ಅಂಶಗಳನ್ನು ಒಳಗೊಂಡ ವಿಚಾರಸಂಕಿರ್ಣ ನಡೆ ಯಲಿದೆ ಎಂದರು.

ಎಂ.ಪಿ.ಬಗಲಿ, ಎಸ್.ಎಂ.ಜಂಬು ಕೇಶ್ವರ, ಪ್ರತಿಭಾ ಜನಮಟ್ಟಿ ಪತ್ರಿಕಾ ಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)