ಮಂಗಳವಾರ, ಏಪ್ರಿಲ್ 13, 2021
31 °C

ಸುದೀಪ್ ದರ್ಶನಕ್ಕೆ ಅಭಿಮಾನಿಗಳ ಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ನಾರಾಯಣಪುದ ಆರ್.ಟಿ.ಜೆ ಗ್ರೂಪ್ಸ್ ವತಿಯಿಂದ 22 ದಿನಗಳವರೆಗೆ ನಡೆದ ಕೆ.ಪಿ.ಎಲ್ ಟ್ರೋಫಿಯ ಅಂತಿಮ ದಿನವಾದ ಶುಕ್ರ ವಾರ ಚಿತ್ರನಟ ಸುದೀಪ್ ಆಗಮಿ ಸಿದ್ದರು. ಮಧ್ಯಾನ್ಹ 2 ಗಂಟೆ ಸುಮಾ ರಿಗೆ ನಾರಾಯಣಪುರ ಆಗಮಿಸು ತ್ತಿದ್ದಂತೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಛಾಯಾ ಭಗವತಿ ದೇವಸ್ಥಾನದ ರಸ್ತೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಯೊಂದಿಗೆ ಆಟದ ಮೈದಾನದವರೆಗೆ ಕರದುಕೊಂಡು ಹೋಗಲಾಯಿತು.

 

ನಂತರ ವೇದಿಕೆಗೆ ಆಗಮಿಸಿ ಮಾತು ಆರಂಭಿಸುತ್ತಾ, ನಿತ್ಯ ಯಾಂತ್ರಿಕವಾಗಿ ಜೀವನ ನಡೆಸುತ್ತಿದ್ದು, ಆರ್.ಟಿ.ಜೆ ಗೃಪ್ಸ್ ಹಮ್ಮಿಕೊಂಡ ಕ್ರಿಕೆಟ್ ಕ್ರೀಡಾ ಕೂಟದಿಂದ ಇಂದು ಉತ್ತರ ಕರ್ನಾ ಟಕದ ಅಭಿಮಾನಿಗಳನ್ನು ನೋಡುವ ಭಾಗ್ಯ ಲಭಿಸಿತು. ಆದ್ದರಿಂದ  ಆರ್. ಟಿ.ಜೆ ಗ್ರೂಪ್ಸ್‌ಗೆ ಅಭಿನಂದನೆಗಳು ಎಂದರು. ಅಲ್ಲದೇ ಸುರಪುರ ತಾಲ್ಲೂಕಿನ ಪರಿಸರ, ಪ್ರೇಕ್ಷಣಿಯ ಸ್ಥಳಗಳು ತುಂಬಾ ಇಷ್ಟವಾಗಿದ್ದು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಶೂಟಿಂಗ್ ಮಾಡುವ ಅಭಿಲಾಷೆ ಇದೆ ಎಂದು ಹೇಳಿದರು.

 

ಫೈನಲ್ ಪ್ರವೇಶಿಸಿದ ಮಣಿಕಂಠ ಮತ್ತು ನೀಲಗಂಗಾ ತಂಡದ ಟಾಸ್ ಮಾಡಿದರು. ಕೆಂಪೆಗೌಡ ಚಿತ್ರದ ನಿರ್ಮಾಪಕ ಶಂಕರಲಿಂಗೇಗೌಡ, ಯೋಗೀಶ, ಕಾರ್ತಿಕ ಕೆಲವೇ ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಶಾಸಕ ರಾಜುಗೌಡ ಸಹ ಈ ಕ್ರೀಡಾ ಕೂಟದಲ್ಲಿ ಕ್ರಿಡಾಪಟುವಾಗಿ ಪಾಲ್ಗೊಂಡಿದ್ದರು.

 

ಜಿಪಂ ಸದಸ್ಯ ಎಚ್.ಸಿ.ಪಾಟೀಲ, ಚಂದ್ರಶೇಖರಗೌಡ ಮಾಗನೂರ, ಮೋತಿರಾಮ ಚವ್ವಾಣ, ಚಂದ್ರ ಶೇಖರ ದಂಡಿನ್, ಮೌನೇಶ ಚಿಂಚೋಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವು ಬಿರಾದಾರ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಂ ಡಿದ್ದರು. ಪಿ.ಎಸ್.ಐಗಳಾದ ಘಾಳೇಪ್ಪ, ದೌಲತ್.ಎನ್.ಕೆ ಬಂದೋಬಸ್ತ ಒದಗಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.