ಬುಧವಾರ, ನವೆಂಬರ್ 20, 2019
20 °C

ಸುದೀರ್ಘ ಚರ್ಚಾಗೋಷ್ಠಿ: ಗಿನ್ನಿಸ್ ದಾಖಲೆ

Published:
Updated:

ಕಠ್ಮಂಡು (ಪಿಟಿಐ): ನೇಪಾಳದ ಟಿವಿ ವಾಹಿನಿಯೊಂದರ ನಿರೂಪಕರು 62 ತಾಸುಗಳ ಕಾಲ ಚರ್ಚಾಗೋಷ್ಠಿ ನಡೆಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದಾರೆ. ವಿಶ್ವದಲ್ಲಿ ಇಷ್ಟು ಸುದೀರ್ಘ ಕಾಲ ಚರ್ಚಾಗೋಷ್ಠಿ ಹಿಂದೆಂದೂ ನಡೆದಿರಲಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಭಾನುವಾರ ಹೇಳಿದ್ದಾರೆ.ಅಮೆರಿಕದಲ್ಲಿ ಒಂದು ದಶಕದಿಂದ ನೆಲೆಸಿರುವ ರಾಬಿ ಲಮಿಚ್ಚಾನೆ ಅವರು `ಬುದ್ಧ ಹುಟ್ಟಿದ್ದು ನೇಪಾಳದಲ್ಲಿ' ಎಂಬ ಚರ್ಚಾಗೋಷ್ಠಿಯನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವು ನೇಪಾಳಿ ಭಾಷೆಯಲ್ಲಿದ್ದು, ಇಂಗ್ಲಿಷ್ ಅಡಿ ಟಿಪ್ಪಣಿಯೊಂದಿಗೆ `ನ್ಯೂಸ್24 ಸ್ಟುಡಿಯೊ' ವಾಹಿನಿ ಮತ್ತು ಅದರ ವೆಬ್‌ಸೈಟ್‌ಗಳಲ್ಲಿ 62 ತಾಸು 12 ನಿಮಿಷಗಳ ಕಾಲ ಪ್ರಸಾರವಾಗಿದೆ.ಈ ಕಾರ್ಯಕ್ರಮವು ಈ ಹಿಂದಿನ ಗಿನ್ನಿಸ್ ವಿಶ್ವದಾಖಲೆಯನ್ನು ಅಳಿಸಿ ಹಾಕಿದೆ. ಉಕ್ರೇನ್‌ನ ನಿರೂಪಕರಿಬ್ಬರು 2011ರಲ್ಲಿ 52 ತಾಸುಗಳ ಕಾಲ ನಡೆಸಿಕೊಟ್ಟಿದ್ದು ಗಿನ್ನಿಸ್ ವಿಶ್ವದಾಖಲೆಯಲ್ಲಿ ದಾಖಲಾಗಿತ್ತು. ಲಮಿಚ್ಚಾನೆ ಅವರು ನಡೆಸಿಕೊಟ್ಟ ಚರ್ಚಾಗೋಷ್ಠಿಯಲ್ಲಿ 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)