ಸುದ್ದಿವಾಹಿನಿಗೆ ಕಣ್ಣು, ಕಿವಿಗೊಟ್ಟ ಅಕ್ಷಯ್‌ ಠಾಕೂರ್‌ ಕುಟುಂಬ

7

ಸುದ್ದಿವಾಹಿನಿಗೆ ಕಣ್ಣು, ಕಿವಿಗೊಟ್ಟ ಅಕ್ಷಯ್‌ ಠಾಕೂರ್‌ ಕುಟುಂಬ

Published:
Updated:

ಔರಂಗಾಬಾದ್‌ (ಬಿಹಾರ) (ಪಿಟಿಐ): ಮಗನ ಬಗ್ಗೆ ದೇವರು ದಯೆ ತೋರುತ್ತಾನೆ ಎಂಬ ನಂಬಿಕೆ ಇರಿಸಿಕೊಂಡಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಅಕ್ಷಯ್‌ ಠಾಕೂರ್‌ನ ಕುಟುಂಬವು ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ಟಿ.ವಿ ಸುದ್ದಿವಾಹಿನಿಗಳಿಂದ ಕಣ್ಣು, ಕಿವಿ ಕೀಳಲಿಲ್ಲ.ಮಂಗಳವಾರ ರಾತ್ರಿಯಿಂದ ಆಹಾರ ಸೇವಿಸದ ಕುಟುಂಬ ಸದಸ್ಯರು ಬುಧವಾರ ಸಂಜೆವರೆಗೂ ಏನೂ ತಿಂದಿರಲಿಲ್ಲ. ಶುಕ್ರವಾರ ಶಿಕ್ಷೆ ಪ್ರಕಟಣೆ ಆಗುತ್ತದೆ ಎಂಬ ವಿಷಯ ತಿಳಿದ ಮೇಲೆ ಕುಟುಂಬ ಸದಸ್ಯರು ತಾತ್ಕಾಲಿಕ­ವಾದರೂ ಕೊಂಚ ನಿರಾಳ­ರಾದರು ಎಂದು ಕುಟುಂಬದ ಆಪ್ತರು ಹೇಳಿದ್ದಾರೆ.

ಕುಟುಂಬ ಸದಸ್ಯರು ಮಾಧ್ಯಮ­ದವರೊಂದಿಗೆ ಮಾತನಾಡಲು ಮನೆ­ಯಿಂದ ಹೊರಗೆ ಬರಲಿಲ್ಲ. ಅಕ್ಷಯ್‌ ಎಸಗಿರುವ ನೀಚ ಕೃತ್ಯದ ಬಗ್ಗೆ ಗ್ರಾಮಸ್ಥ­ರಲ್ಲಿ ಆಕ್ರೋಶ­ವಿದ್ದರೂ, ಆತನ ಮುಗ್ಧ ಹೆಂಡತಿ ಮತ್ತು 2 ವರ್ಷದ ಗುಂಡು ಮಗುವಿನ ಬಗ್ಗೆ ಕನಿಕರ ಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry