ಭಾನುವಾರ, ಏಪ್ರಿಲ್ 11, 2021
21 °C

ಸುನಂದ್, ಮೈತ್ರೇಯಿ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಂಗಳೂರಿನ ಹೊರೈಜಾನ್ ಕ್ಲಬ್‌ನ ಸುನಂದ್ ವಾಸನ್ ಮತ್ತು ಬೆಳಗಾವಿ ಬಿಟಿಟಿಎಯ ಮೈತ್ರೇಯಿ ಬೈಲೂರ ಇಲ್ಲಿ ನಡೆದಿರುವ ಎಲ್‌ಐಸಿ ಕಪ್ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಮಂಗಳವಾರ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ಪ್ರಶಸ್ತಿ ಗೆದ್ದುಕೊಂಡರು.ಬಾಲಕರ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಸುನಂದ್ 11-6, 11-9, 11-5, 11-9ರಿಂದ ಬೆಂಗಳೂರು ಬಿಎನ್‌ಎಂನ ಅಗ್ರ ಶ್ರೇಯಾಂಕದ ಶ್ರೇಯಲ್ ತೇಲಾಂಗ್ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೆಮಿಫೈನಲ್‌ನಲ್ಲಿ ಸುನಂದ್  5-11, 15-13, 11-7, 11-8, 11-5ರಿಂದ ಧಾರವಾಡ ಎಟಿಟಿಎಯ ಅಕ್ಷಯ್ ಬಸವಾ ಮೇಲೂ; ಶ್ರೇಯಲ್ 7-11, 12-10, 11-6, 11-6, 11-13, 11-3ರಿಂದ ಬೆಂಗಳೂರಿನ ಜೆಟಿಟಿಎಯ ಕೇಶವರಾಜ್ ವಿರುದ್ಧವೂ ಗೆಲುವು ಪಡೆದರು.ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಮೈತ್ರೇಯಿ 6-11, 8-11, 11-4, 11-7, 12-10, 11-9ರಿಂದ ಮೈಸೂರು ಪಿಟಿಟಿಎಯ ಎರಡನೇ ಶ್ರೇಯಾಂಕದ ಎಂ.ವಿ. ಸ್ಫೂರ್ತಿ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಎನಿಸಿದರು.ಸೆಮಿಫೈನಲ್‌ನಲ್ಲಿ ಮೈತ್ರೇಯಿ 7-11, 6-11, 8-11, 11-7, 11-3, 11-5, 11-7ರಿಂದ ಜೆಟಿಟಿಎಯ ಆರ್. ರಕ್ಷಾ ವಿರುದ್ಧ ಪ್ರಯಾಸಕರವಾಗಿ ಗೆದ್ದರೆ, ಸ್ಫೂರ್ತಿ 8-11, 11-3, 11-4, 7-11, 11-7, 11-5ರಿಂದ ಕ್ಯಾಪಿಟಲ್ ಸಿಟಿ ಅಕಾಡೆಮಿಯ ಅರ್ಚನಾ ಕಾಮತ್ ಅವರನ್ನು ಪರಾಭವಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.