ಸುನಾಮಿಯಿಂದ ರಕ್ಷಣೆ: ಇಸ್ರೊ ಉಪಗ್ರಹಕ್ಕೆ ಮೊರೆ

7

ಸುನಾಮಿಯಿಂದ ರಕ್ಷಣೆ: ಇಸ್ರೊ ಉಪಗ್ರಹಕ್ಕೆ ಮೊರೆ

Published:
Updated:

ನವದೆಹಲಿ (ಪಿಟಿಐ):  ಆಸ್ಟ್ರೇಲಿಯಾ ದಂತಹ ಮುಂದುವರೆದ ರಾಷ್ಟ್ರಗಳು    ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೆರವು ಪಡೆಯಲು ಮುಂದಾಗಿರುವುದು ದೇಶದ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ.ಸಾಗರದ ಅಧ್ಯಯನ ಮತ್ತು ರಕ್ಷಣೆ ಉದ್ದೇಶದಿಂದ ಹಾರಿಬಿಡಲಾದ ಇಸ್ರೊದ ‘ಓಸಿಯನ್‌ ಸ್ಯಾಟ್‌-2’ ಉಪ ಗ್ರಹದ ದತ್ತಾಂಶ ಹಂಚಿಕೊಳ್ಳಲು ಆಸ್ಟ್ರೇಲಿಯಾ ಸರ್ಕಾರ ಉತ್ಸಾಹ ತೋರಿಸಿದೆ.ಸುನಾಮಿ ಮತ್ತು ಚಂಡಮಾರುತಗಳಿಂದ ತನ್ನ 60 ಸಾವಿರ ಕಿ.ಮೀ ಕರಾವಳಿ ತೀರವನ್ನು ರಕ್ಷಿಸಲು ಇಸ್ರೊದ ನೆರವು ಕೋರಿದೆ.

ಒಸಿಯನ್‌ ಸ್ಯಾಟ್‌-2 ಉಪಗ್ರಹ ಸಾಗರದ ಬಣ್ಣ, ವಿಶೇಷತೆಗಳನ್ನು ಕರಾರುವಕ್ಕಾಗಿ ತಿಳಿಸುತ್ತದೆ. ಸಾಗರದ ನೀರಿನ ಬಣ್ಣ ಮತ್ತು ವಾತಾವರಣ­ದಲ್ಲಾಗುವ ಬದಲಾ­ವಣೆಗಳಿಂದ ಸುನಾ­ಮಿಯ ಮತ್ತು ಚಂಡಮಾರುತ ಅಪ್ಪಳಿಸುವ ಅಪಾಯವನ್ನು  ಮುಂಚಿತವಾಗಿ ಅರಿಯಬಹುದಾಗಿದೆ.ಈ ಉಪಗ್ರಹ ಕಳಿಸುವ ಚಿತ್ರಗಳು ಅತ್ಯಂತ  ಸ್ಪಷ್ಟ ಮತ್ತು ಕರಾರುವಕ್ಕಾಗಿರುತ್ತವೆ ಎನ್ನು ತ್ತಾರೆ ಆಸ್ಟ್ರೇಲಿಯಾದ ಖನಿಜ ಮತ್ತು ಪ್ರಕೃತಿ ವಿಕೋಪ ನಿಯಂತ್ರಣ ವಿಭಾಗದ ಮುಖ್ಯಸ್ಥ ಆ್ಯಂಡಿ ಬರ್ನಿಕೋಟ್‌.ಮಾರ್ಗಸೂಚಿ ವ್ಯವಸ್ಥೆಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣ­ವಾಗಿರುವ ಐಆರ್‌ಎನ್‌ಎಸ್‌ಎಸ್‌ ಮತ್ತು ಹಗಲು, ರಾತ್ರಿಗಳಲ್ಲದೇ ಪ್ರತಿ­ಕೂಲ ವಾತಾವರಣದಲ್ಲೂ ಭೂಮಿಯ ಸ್ಪಷ್ಟ ಚಿತ್ರಗಳನ್ನು ಹಿಡಿಯ ಬಲ್ಲ ರಿಸಾಟ್‌ ಉಪಗ್ರಹಗಳ ನೆರವನ್ನು ಪಡೆಯಲು  ಉತ್ಸುಕರಾಗಿರುವುದಾಗಿ ಅವರು ತಿಳಿಸಿದರು.ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಇಸ್ರೊ ಅಧಿಕಾರಿಗಳನ್ನು ಕಂಡು ಈ ಕುರಿತು ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry