ಗುರುವಾರ , ನವೆಂಬರ್ 14, 2019
18 °C

ಸುನಿಲ್ ಮೇಲೆ ಹೆಚ್ಚು ಒತ್ತಡ: ಮಾರ್ಗನ್

Published:
Updated:

ಕೋಲ್ಕತ್ತ (ಪಿಟಿಐ): ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಸೋತು ಚಿಂತೆಗೀಡಾಗಿರುವ ಕೋಲ್ಕತ್ತ ನೈಟ್ ರೈಡರ್ಸ್, ಗೆಲುವಿನ ಹಾದಿಗೆ ಮರಳಲು ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ಹೆಚ್ಚು ಅವಲಂಬಿಸಿದೆ.ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಕೆಆರ್ ಬ್ಯಾಟ್ಸ್‌ಮನ್ ಇಯಾನ್ ಮೋರ್ಗನ್, `ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆಯುವ ಪಂದ್ಯದಲ್ಲಿ ಸುನಿಲ್ ನಾರಾಯಣ್ ಮೇಲೆ ಹೆಚ್ಚು ನಿರೀಕ್ಷೆ ಹೊಂದಿದ್ದೇವೆ. ಅವರು ತಂಡಕ್ಕೆ ಆಶಾಕಿರಣ.ಪಂದ್ಯ ಗೆದ್ದುಕೊಡುವ ಶಕ್ತಿಯನ್ನು ಅವರು ಹೊಂದಿದ್ದಾರೆ. ತಂಡ ಸೋಲುತ್ತಿದ್ದರೂ ಸುನಿಲ್ ಚೆನ್ನಾಗಿ ಬೌಲಿಂಗ್ ಮಾಡುವುದನ್ನು ನೋಡಲು ಸಂತಸವಾಗುತ್ತದೆ' ಎಂದು ಹೇಳಿದರು.ಇದೇ ವೇಳೆ, `ಸತತ ಸೋಲಿನಿಂದ ತಂಡ ಚಿಂತೆಗೀಡಾಗಿಲ್ಲ. ಕಳೆದ ಬಾರಿಯ ಟೂರ್ನಿಯಲ್ಲೂ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದ ತಂಡ, ನಂತರ ಚೇತರಿಸಿಕೊಂಡಿತ್ತು. ಈ ಬಾರಿಯೂ ಗೆಲುವಿನ ಹಾದಿಗೆ ತಂಡ ಮರಳಲಿದೆ. ಭಾನುವಾರದ ಪಂದ್ಯದಿಂದಲೇ ನಮ್ಮ ಗೆಲುವಿನ ಅಭಿಯಾನ ಮತ್ತೆ ಆರಂಭವಾಗಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)