ಸುಪಾರಿ ಹತ್ಯೆ ಯತ್ನ: ಇಂದು ಕನಕಪುರ ಬಂದ್

ಶನಿವಾರ, ಜೂಲೈ 20, 2019
24 °C

ಸುಪಾರಿ ಹತ್ಯೆ ಯತ್ನ: ಇಂದು ಕನಕಪುರ ಬಂದ್

Published:
Updated:

ಕನಕಪುರ: ಶಾಸಕರ ಸಹೋದರರ ಏಳಿಗೆಯನ್ನು ಸಹಿಸದ ಕೆಲವು ರಾಜಕೀಯ ಪಕ್ಷದವರು ಸುರೇಶ್ ಅವರ ಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸ್ ತನಿಖೆಯಿಂದ ಈ ಸಂಚು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಜೈಲಿಗೆ ಕಳಿಸಲಾಗಿದೆ. ಆದರೆ ಇದರ ಹಿಂದೆ ಕೆಲವು ಕಾಣದ ಕೈಗಳು ಆರೋಪಿಗಳ ರಕ್ಷಣೆಗೆ ನಿಂತಿವೆ ಎಂದು ಅವರು ಆರೋಪಿಸಿದರು.

 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಕನ್ಯ ರಂಗಸ್ವಾಮಿ, ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ ಮಾತನಾಡಿ, ಪಟ್ಟಣ ಶಾಂತಿಪ್ರಿಯ ಸ್ಥಳ. ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ, ಸೌಹಾರ್ದತೆಗೆ ಹೆಸರಾದ ಈ ಪಟ್ಣದಲ್ಲಿ ಕೆಲವು ರಾಜಕೀಯ ಮುಖಂಡರು ಸುಪಾರಿ ನೀಡಿ ಕೊಲೆ ಮಾಡಿಸುವಂತ ಹೀನ ಕೃತ್ಯಕ್ಕೆ ಕೈಹಾಕಿದ್ದು, ತಾಲ್ಲೂಕಿನ ಶಾಂತಿಕದಡಲು ಹೊರಟಿದ್ದಾರೆ ಎಂದು ಟೀಕಿಸಿದರು.ಕನಕಪುರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಬಂದ್ ನಡೆಸುತ್ತಿದ್ದು,  ತಾಲ್ಲೂಕಿನ ನಾಗರಿಕರು ಹಾಗೂ ಉದ್ಯಮಿಗಳು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡುವ ಮೂಲಕ ಕನಕಪುರ ಬಂದ್‌ನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry