ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ: ಇರಾದೆ

7

ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ: ಇರಾದೆ

Published:
Updated:

ಮುಂಬೈ (ಐಎಎನ್‌ಎಸ್): ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಾಬ್‌ಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿರುವ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂದು ಕಸಾಬ್ ಪರ ವಕೀಲೆ ಫರ್ಹಾನಾ ಷಾ ತಿಳಿಸಿದ್ದಾರೆ.‘ಈ ಸಂಬಂಧ ನಾವು ಕಸಾಬ್‌ನನ್ನು ಭೇಟಿ ಮಾಡಲಿದ್ದೇವೆ ಮತ್ತು ಖಂಡಿತವಾಗಿಯೂ ಸುಪ್ರೀಂ ಕೋರ್ಟಿನಲ್ಲಿ ಈ ತೀರ್ಪನ್ನು ಪ್ರಶ್ನಿಸಲಿದ್ದೇವೆ’ ಎಂದು ಅವರು ತಿಳಿಸಿದರು.‘ಹೈಕೋರ್ಟ್ ನೀಡಿರುವ ತೀರ್ಪನ್ನು ಓದಿದ ಬಳಿಕವಷ್ಟೇ ಈ ಬಗ್ಗೆ ಏನನ್ನಾದರೂ ಹೇಳಲು ಸಾಧ್ಯ. ಆದಾಗ್ಯೂ ಮೇಲ್ಮನವಿ ಸಲ್ಲಿಕೆಗೆ 30 ದಿನಗಳ ಕಾಲಾವಕಾಶವಿದೆ. ಅಷ್ಟರೊಳಗೆ ನಾವು ಈ ದಿಸೆಯಲ್ಲಿ ಮುಂದುವರಿಯಲಿದ್ದೇವೆ’ ಎಂದು ಫರ್ಹಾನಾ ವಿವರಿಸಿದರು.‘ಈವರೆಗೂ ಕಸಾಬ್‌ನನ್ನು ಬಾಂಬೆ ಹೈಕೋರ್ಟಿನಲ್ಲಿ ಸಮರ್ಥಿಸುವುದಷ್ಟೇ ತಮ್ಮ ಕೆಲಸವಾಗಿತ್ತು’ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ಫರ್ಹಾನಾ, ‘ಮೇಲ್ಮನವಿ ಸಲ್ಲಿಸಬೇಕೊ ಬೇಡವೊ ಎಂಬುದು ಕಸಾಬ್‌ನ ವಿವೇಚನೆಗೆ ಬಿಟ್ಟ ವಿಚಾರ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry