ಮಂಗಳವಾರ, ಅಕ್ಟೋಬರ್ 15, 2019
29 °C

ಸುಪ್ರೀಂಕೋರ್ಟ್: ಚುನಾವಣೆ ದಿನಾಂಕ ನಿಗದಿ - ಹಸ್ತಕ್ಷೇಪವಿಲ್ಲ

Published:
Updated:

ನವದೆಹಲಿ (ಐಎಎನ್‌ಎಸ್): ಚುನಾವಣಾ ದಿನಾಂಕ ನಿಗದಿ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲಎಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.  ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆ ದಿನಾಂಕ ಮರುಪರಿಶೀಲಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.ನ್ಯಾಯಾಲಯ ಚುನಾವಣೆ ದಿನ ನಿಗದಿಪಡಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಪೀಠ ಹೇಳಿದೆ.ಉತ್ತರ ಪ್ರದೇಶದಲ್ಲಿ ಚುನಾವಣೆ ಮತ್ತು ಸಿಬಿಎಸ್‌ಇ ಪರೀಕ್ಷೆ ಏಕಕಾಲಕ್ಕೆ ನಡೆಯುತ್ತಿರುವುದು ಮತ್ತು ಉತ್ತರಾಖಂಡದಲ್ಲಿ ಚಳಿ ಹಿನ್ನೆಲೆಯಲ್ಲಿ ಚುನಾವಣೆ ದಿನ ಮರು ನಿಗದಿಪಡಿಸುವಂತೆ ಕೋರಿ ಸಿ.ಪಿ. ವ್ಯಾಸ್ ಸಲ್ಲಿಸಿದ್ದರು.  ಉತ್ತರಾಖಂಡ ರಾಜ್ಯದಲ್ಲಿ ಜ.30ರಂದು ಮತ್ತು ಉತ್ತರ ಪ್ರದೇಶದಲ್ಲಿ ಫೆಬ್ರುವರಿಯಲ್ಲಿ ಚುನಾವಣೆ ನಡೆಯಲಿದೆ.

Post Comments (+)