ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಿಸಿಸಿಐ

7

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಿಸಿಸಿಐ

Published:
Updated:

ನವದೆಹಲಿ(ಐಎಎನ್‌ಎಸ್):   ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್ ಮೋದಿ ರಾಜಸ್ತಾನ ಕ್ರಿಕೆಟ್‌ ಸಂಸ್ಥೆ (ಆರ್‌ಸಿಎ) ಚುನಾವಣೆಗೆ ಸ್ಪರ್ಧಿಸಿರು ವುದನ್ನು ಪ್ರಶ್ನಿಸಿ ಬಿಸಿಸಿಐ ಗುರುವಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.ಮೋದಿ ಮೇಲೆ ಆಜೀವ ನಿಷೇಧ ಹೇರಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಬಿಸಿಸಿಐ ಈ ಹಿಂದೆ ಸೂಚಿಸಿದರೂ ಆರ್‌ಸಿಎ ಇದನ್ನು ತಿರಸ್ಕರಿಸಿತ್ತು. ನಂತರ ಡಿಸೆಂಬರ್‌ 19 ರಂದು ಚುನಾವಣೆಯೂ ನಡೆದಿದೆ.ರಾಜಸ್ತಾನ ಕ್ರೀಡಾ ಕಾಯ್ದೆ 2005 ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ರುವ ಆರ್‌ಸಿಎ ಮಾಜಿ ಕಾರ್ಯದರ್ಶಿ ಕಿಶೋರ್ ರುಂಗ್ಟಾ ಅವರ ಕಾನೂನು ಹೋರಾಟಕ್ಕೆ ಕೈಜೋಡಿಸುವ ನಿರ್ಧಾ ರವನ್ನು ಬಿಸಿಸಿಐ ಕೈಗೊಂಡಿತ್ತು. ರುಂಗ್ಟಾ ಅವರ ಅರ್ಜಿಯ ವಿಚಾರಣೆ ಕೂಡಾ ಜ.6 ರಂದು ವಿಚಾರಣೆಗೆ ಬರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry