ಸುಪ್ರೀಂ ನಿಲುವಿಗೆ ಬಿಜೆಪಿ ಸಂತಸ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸುಪ್ರೀಂ ನಿಲುವಿಗೆ ಬಿಜೆಪಿ ಸಂತಸ

Published:
Updated:

ಮುಂಬೈ (ಪಿಟಿಐ):  2002ರ ಗುಜರಾತ್ ಹಿಂಸಾಚಾರ ಘಟನೆಯಲ್ಲಿ ಮೋದಿ ಸರ್ಕಾರದ ನಿರ್ಲಕ್ಷ್ಯದ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ತೀರ್ಮಾನ ಕೈಗೊಳ್ಳಲಿ ಎನ್ನುವ ಸುಪ್ರೀಂ ಕೋರ್ಟ್‌ನ ಸೂಚನೆ ಬಿಜೆಪಿಗೆ ಸಮಾಧಾನ ತಂದಿದೆ ಎಂದು ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.ದೇವರು ದೊಡ್ಡವನು- ಮೋದಿ (ಅಹಮದಾಬಾದ್ ವರದಿ): ಸುಪ್ರೀಂ ಕೋರ್ಟಿನ ನಿಲುವಿನಿಂದ ತಮಗೆ ನಿರಾಳವಾಗಿದೆ. ದೇವರು ದೊಡ್ಡವನು ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.`ಇತ್ಯರ್ಥಕ್ಕೆ ಮುನ್ನವೇ ಬಿಜೆಪಿ ಪ್ರತಿಕ್ರಿಯೆ~ (ನವದೆಹಲಿ ವರದಿ): ಗುಜರಾತ್ ಗಲಭೆ ಪ್ರಕರಣದಲ್ಲಿ  ಸುಪ್ರೀಂ ಕೋರ್ಟಿನ ನಿಲುವಿನಿಂದ ಪ್ರಕರಣ ಪೂರ್ಣ ಇತ್ಯರ್ಥವಾಗಿಲ್ಲ. ಆದರೆ ಬಿಜೆಪಿ ತಮ್ಮ ಜಯವೆಂದು ಪ್ರತಿಕ್ರಿಯೆ ನೀಡುತ್ತಿದೆ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.`ಮೋದಿ ನಿರ್ದೋಷಿ ಎಂದಿಲ್ಲ~ (ನವದೆಹಲಿ ವರದಿ): ಗುಜರಾತ್ ಗಲಭೆ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವೇ ತೀರ್ಮಾನಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ ಮಾತ್ರಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ದೋಷಿ ಎಂದು ಹೇಳಿಲ್ಲ ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.ನಿರಾಸೆಯಾಗಿದೆ- ಝಾಕಿಯಾ (ಅಹಮದಾಬಾದ್ ವರದಿ): ಗಲಭೆ ನಿಯಂತ್ರಿಸಲು ನರೇಂದ್ರ ಮೋದಿ ವಿಫಲವಾದ ಘಟನೆಯ ಬಗ್ಗೆ ವಿಚಾರಣೆ ನಡೆಸಿ ತೀರ್ಮಾನಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ವಹಿಸಿರುವ ಕ್ರಮದಿಂದ ತಮಗೆ ನಿರಾಸೆಯಾಗಿದೆ ಎಂದು ಈ ಬಗ್ಗೆ ಅರ್ಜಿ ಸಲ್ಲಿಸಿದ್ದ ಝಾಕಿಯಾ ಜಾಫ್ರಿ ಹೇಳಿದ್ದಾರೆ.

ಆದರೂ ತಮಗೆ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry