ಸುಬ್ಬಯ್ಯ ಪಿಳ್ಳೈ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕ ತಂಡಕ್ಕೆ ಗೋವಾ ಎದುರಾಳಿ

7

ಸುಬ್ಬಯ್ಯ ಪಿಳ್ಳೈ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕ ತಂಡಕ್ಕೆ ಗೋವಾ ಎದುರಾಳಿ

Published:
Updated:

ಬೆಂಗಳೂರು: ಕರ್ನಾಟಕ ತಂಡದವರು ಸೋಮವಾರ ಇಲ್ಲಿ ಆರಂಭವಾಗಲಿರುವ ಕೆ.ಎಸ್.ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿ ತಮ್ಮ ಮೊದಲ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದ್ದಾರೆ.

ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಲಿದೆ. ಕಳೆದ ಮೂರು ವರ್ಷಗಳಿಂದ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಕರ್ನಾಟಕ ಈ ಬಾರಿ ಹೊಸ ಉತ್ಸಾಹದಲ್ಲಿ ಕಣಕ್ಕಿ ಳಿಯುತ್ತಿದೆ. ಸ್ಫೋಟಕ ಹೊಡೆತಗಳ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ತಂಡವನ್ನು ಮುನ್ನಡೆಸುತ್ತಿದ್ದಾರೆ. 

10 ವರ್ಷಗಳ ಬಳಿಕ ಈ ಟೂರ್ನಿಗೆ ಕರ್ನಾಟಕ ಆತಿಥ್ಯ ವಹಿಸುತ್ತಿದೆ. 2011ರಲ್ಲಿ ಕೇರಳದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕ ಎದುರು ಗೆದ್ದ ತಮಿಳುನಾಡು ತಂಡ ಚಾಂಪಿಯನ್ ಆಗಿತ್ತು. ಆದರೆ ಕರ್ನಾಟಕ ಈ ಬಾರಿ ಬೌಲಿಂಗ್‌ನಲ್ಲಿ ಅನುಭವಿಗಳ ಕೊರತೆ ಎದುರಿಸುತ್ತಿದೆ. ಏಕೆಂದರೆ ಆರ್.ವಿನಯ್ ಕುಮಾರ್, ಎಸ್.ಅರವಿಂದ್ ಹಾಗೂ ಎನ್.ಸಿ.ಅಯ್ಯಪ್ಪ ಅವರ ಸೇವೆ ಲಭ್ಯರಾಗುತ್ತಿಲ್ಲ.

ಗೋವಾ ತಂಡವನ್ನು ಶದಾಬ್ ಜಕಾತಿ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಸ್ವಪ್ನಿಲ್ ಆಸ್ನೋಡ್ಕರ್, ಸೌರಭ್ ಬಾಂಡೇಕರ್ ಅವರಂಥ ಬ್ಯಾಟ್ಸ್‌ಮನ್‌ಗಳಿದ್ದಾರೆ.

ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆಗೆ. ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry