ಸೋಮವಾರ, ಜೂನ್ 21, 2021
30 °C

ಸುಬ್ರತೊ ಅರ್ಜಿ ಇಂದು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಐಎಎನ್‌ಎಸ್):  ಮಾ.4 ರಂದು ಸುಪ್ರೀಂ­ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಜೈಲು ಶಿಕ್ಷೆಗೆ ಒಳಗಾಗಿರುವ ಸಹಾರಾ ಸಮೂ ಹದ ಅಧ್ಯಕ್ಷ ಸುಬ್ರತೊ ರಾಯ್‌  ಮೇಲ್ಮನವಿ ಸಲ್ಲಿಸಿದ್ದು, ಗುರು­ವಾರ ಈ ಮನವಿ ವಿಚಾರಣೆಗೆ ಬರಲಿದೆ.ತಮ್ಮನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ಕೋರ್ಟ್‌ ಆದೇಶ ಕಾನೂನುಬಾಹಿರ ಎಂದು ರಾಯ್‌ ವಾದಿಸಿದ್ದರು.ನ್ಯಾಯಮೂರ್ತಿ ಕೆ.ಎಸ್‌. ರಾಧಾ ಕೃಷ್ಣನ್‌ ಮತ್ತು ಜೆ.ಎಸ್‌. ಕೇಹರ್‌ ಅವ ರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ ಪೀಠ ಮನವಿ ವಿಚಾರಣೆ ನಡೆಸಲಿದೆ.ವಿಚಾರಣೆ ವೇಳೆ ಮಾತನಾಡಿದ ಸುಬ್ರತೊ ಪರ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ, ಎ.ಆರ್‌.­ಅಂತುಲೆ ಪ್ರಕರಣದಲ್ಲಿಯೂ ಸುಪ್ರೀಂ­ಕೋರ್ಟ್‌ ನೀಡಿದ್ದ ತನ್ನ ತಪ್ಪು ತೀರ್ಪನ್ನು ತಿದ್ದಿಕೊಂಡಿತ್ತು ಎಂದು ಹೇಳಿದರು.ಇಬ್ಬರು ನ್ಯಾಯಮೂರ್ತಿಗಳು ನೀಡುವ ತೀರ್ಪಿನಲ್ಲಿ ತಪ್ಪಿದೆ ಎಂದು ಹೇಳಲು ಮುಜುಗರವಾಗುತ್ತದೆ ಎಂದು ಜೇಠ್ಮಲಾನಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೆ.ಎಸ್‌. ಕೇಹರ್‌, ನಾವು ಮುಜುಗರ ಗೊಂಡಿದ್ದೇವೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ’ ಎಂದು  ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.