ಮಂಗಳವಾರ, ಮಾರ್ಚ್ 2, 2021
31 °C

ಸುಮಧುರ ಬಾಂಧವ್ಯಕ್ಕೆ ಕುತ್ತಲ್ಲ ವೃತ್ತಿ

ದಯಾನಂದ Updated:

ಅಕ್ಷರ ಗಾತ್ರ : | |

ಸುಮಧುರ ಬಾಂಧವ್ಯಕ್ಕೆ ಕುತ್ತಲ್ಲ ವೃತ್ತಿ

ಗಂಡ ಹೆಂಡತಿ ಇಬ್ಬರೂ ದುಡಿಯುವ ಕಾಲ ಇದು. ದುಡಿಯುವ ದಂಪತಿ ನಡುವೆ ಮಧುರ ಬಾಂಧವ್ಯ ಕಡಿಮೆ ಎಂಬುದು ಸಾಮಾನ್ಯ ತಿಳಿವಳಿಕೆ. ದಿನದ ಹೆಚ್ಚು ಸಮಯ ದುಡಿಮೆಯಲ್ಲೇ ಕಳೆಯುವ ಪತಿ– ಪತ್ನಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳ ಬಹುದೆಂಬ ಆತಂಕವೂ ಅವರ ಕುಟುಂಬದವರಿಗೆ ಸಾಮಾನ್ಯವೆ.ವೃತ್ತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹೆಣಗಿ ಕೌಟುಂಬಿಕ ಬದುಕಿಗೆ ಮಹತ್ವ ನೀಡದೆ ಹೋಗುವ ಅಪಾಯಗಳೂ ಇಲ್ಲದೆಇಲ್ಲ. ಗಂಡ ಕೆಲಸದಿಂದ ತಡವಾಗಿ ಬಂದ ಕಾರಣಕ್ಕೆ ಮುನಿಸಿಕೊಳ್ಳುವ ಹೆಂಡತಿ, ಹೆಂಡತಿ ಕಚೇರಿಯಿಂದ ಬರುವುದು ತಡವಾಗಿದ್ದಕ್ಕೆ ಸಿಡಿಮಿಡಿಗೊಳ್ಳುವ ಗಂಡ.ಈ ಮುನಿಸು, ಸಿಡಿಮಿಡಿ ಉಂಡು ಮಲಗುವ ತನಕ ಮಾತ್ರ ಇದ್ದರೆ ಒಳಿತು. ಅಲ್ಲದೆ ವೃತ್ತಿ ಬದ್ಧತೆ, ದುಡಿಮೆಯಲ್ಲಿ ಹೆಚ್ಚು ಸಮಯ ತೊಡಗಿಸಿಕೊಳ್ಳುವುದರಿಂದ ಸಂಗಾತಿ ಯೊಂದಿಗಿನ ಮಧುರ ಬಾಂಧವ್ಯದ ಮೇಲೆ ಕೆಟ್ಟ ಪರಿಣಾಮವನ್ನೇನೂ ಬೀರಲಾರದು ಎನುತ್ತದೆ ಇತ್ತೀಚಿನ ಸಂಶೋಧನೆಯೊಂದು.ವೃತ್ತಿ ಬದುಕಿನಲ್ಲಿ ಮೇಲೇರಬೇಕೆಂಬ ಮಹತ್ವಾಕಾಂಕ್ಷೆಯಿಂದ ಹೆಚ್ಚು ಸಮಯ ಕೆಲಸದಲ್ಲೇ ತೊಡಗಿಸಿಕೊಂಡರೂ ಖಾಸಗಿ ಬದುಕಿನಲ್ಲಿ ಸಿಗುವ ಅಲ್ಪ ಸಮಯವನ್ನೇ ಸುಮಧುರವಾಗಿಸಿಕೊಳ್ಳುವುದೂ ಒಂದು ಜಾಣತನ ಎನ್ನುತ್ತದೆ ಸ್ವಿಡ್ಜರ್ಲೆಂಡ್‌ ಮತ್ತು ಜರ್ಮನಿಯ ತಜ್ಞರ ತಂಡ ನಡೆಸಿದ ಸಂಶೋಧನೆ.ವೃತ್ತಿ ಬದುಕಿಗೆ ಹೆಚ್ಚು ಸಮಯ ಮೀಸಲಿಟ್ಟರೂ ಸಂಬಂಧ ನಿಭಾಯಿಸುವ ಕಲೆ ರೂಢಿಸಿಕೊಂಡಿರುವ ಪತಿ– ಪತ್ನಿ ಸುಮಧುರ ಕ್ಷಣಗಳನ್ನು ಕಳೆದುಕೊಳ್ಳಲಾರರು ಎಂದು ಈ ಸಂಶೋಧನೆಯ ವರದಿ ಹೇಳಿದೆ. ಬದುಕಿನಲ್ಲಿ ವೃತ್ತಿಯನ್ನೇ ಹೆಚ್ಚು ಹಚ್ಚಿಕೊಂಡವರು ಖಾಸಗಿ ಬದುಕಿನ ಬಗೆಗೂ ಯೋಚಿಸಬೇಕಾಗುತ್ತದೆ. ವೃತ್ತಿಯಲ್ಲಿ ಬೆಳೆಯಬೇಕೆನ್ನುವ ಗುರಿ ನಿರ್ಧಾರಕ್ಕೂ ಮುನ್ನಾ ಸಂಗಾತಿಗೆ ನೀಡಬೇಕಿರುವ ಸಮಯದ ಬಗ್ಗೆ ತೀರ್ಮಾನಿಸುವುದು ಮುಖ್ಯ ಎನ್ನುತ್ತದೆ ಈ ವರದಿ.ವೃತ್ತಿ ಬದುಕಲ್ಲಿ ಯಶಸ್ವಿಯಾದ ಬಹುತೇಕರು ಖಾಸಗಿ ಬದುಕನ್ನೂ ಅಚ್ಚುಕಟ್ಟಾಗಿ ನಿಭಾಯಿಸಿರುತ್ತಾರೆ. ವೃತ್ತಿ ಮತ್ತು ಬದುಕಿನ ನಡುವಿನ ತಾಳ ಮೇಳ ಸರಿಯಿದ್ದರೆ ಎಲ್ಲವೂ ಸಾಧ್ಯ ಎಂಬುದು ಈ ವರದಿಯ ತಾತ್ಪರ್ಯ. ವೃತ್ತಿಯಲ್ಲಿ ತೊಡಗಿಸಿಕೊಂಡಿರುವ 285 ಜೋಡಿಗಳನ್ನು ಈ ಸಂಶೋಧನೆಗೆ ಒಳಪಡಿಸಲಾಗಿತ್ತು.ವೃತ್ತಿಯಲ್ಲಿ ಉತ್ತುಂಗ ತಲುಪಬೇಕೆಂಬ ಗುರಿ ಹೊಂದಿರುವವರು ಸಂಬಂಧಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಿದೆ ಎಂಬುದನ್ನು ಈ ಸಂಶೋಧನೆ ಸಾಬೀತು ಪಡಿಸಿದೆ. ಸಂಗಾತಿ ಜತೆಗಿನ ಸುಮಧುರ ಬಾಂಧವ್ಯಕ್ಕೆ ವೃತ್ತಿ ಅಡ್ಡಿಯಾಗಲಾರದು ಎಂಬುದನ್ನು ಬಹುತೇಕ ದಂಪತಿಗಳು ಒಪ್ಪಿಕೊಂಡಿದ್ದಾರೆ.ವೃತ್ತಿ ಬದ್ಧತೆಯ ಜತೆಗೆ ಸಂಬಂಧದ ಬದ್ಧತೆಯನ್ನೂ ಮೈಗೂಡಿಸಿಕೊಳ್ಳುವುದು ಬಾಂಧವ್ಯದ ಮಧುರತೆ, ರಸ ಗಳಿಗೆಗಳನ್ನು ಕಾಯ್ದುಕೊಳ್ಳುವ ಮಾರ್ಗವಾಗಬಲ್ಲದು. ವೃತ್ತಿ– ಬದುಕು ಈ ಎರಡನ್ನೂ ನಿಭಾಯಿಸುವ ಕಲೆ ಕರಗತವಾದರೆ ಬಾಳಲ್ಲಿ ಯಾವುದೂ ಹೊರೆಯಾಗಲಾರದು ಎಂಬುದು ನಿಜವೇ ತಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.