ಸುರಂಗ ಮಾರ್ಗ ಕುಸಿತ

7

ಸುರಂಗ ಮಾರ್ಗ ಕುಸಿತ

Published:
Updated:
ಸುರಂಗ ಮಾರ್ಗ ಕುಸಿತ

ಟೊಕಿಯೋ (ಐಎಎನ್‌ಎಸ್): ನಾಲ್ಕು ಕಿ.ಮೀ. ಉದ್ದದ ಸುರಂಗ ಮಾರ್ಗ ಕುಸಿದು ಏಳು ಜನರು ನಾಪತ್ತೆಯಾಗಿರುವ ಘಟನೆ ಜಪಾನಿನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.ಓಟ್ಸುಕಿಯಲ್ಲಿನ ಚೊವ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿರುವ ಸಸಗೊ ಸುರಂಗ ಮಾರ್ಗ ಬೆಳಿಗ್ಗೆ 8 ಗಂಟೆ ಸುಮಾರಿಗೆ ಕುಸಿದ ಪರಿಣಾಮ ಹಲವಾರು ಕಾರುಗಳು ಮಾರ್ಗ ಮಧ್ಯೆದಲ್ಲಿಯೇ ಸಿಲುಕಿವೆ. ದುರಂತ ನಡೆದಾಗ ಸಂಭವಿಸಿದ ವಾಹನ ಅಪಘಾತದಲ್ಲಿ ಸುಟ್ಟು ಕರಕಲಾದ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry