ಮಂಗಳವಾರ, ಜೂನ್ 15, 2021
21 °C

ಸುರಕ್ಷಿತ ಚಾಲನೆಗೆ ಷೆವರ್ಲೆ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರಲ್ ಮೋಟಾರ್ಸ್ ಇಂಡಿಯಾ, ಬೆಂಗಳೂರು ಸಂಚಾರ ಪೊಲೀಸರ ಸಹಯೋಗದಲ್ಲಿ `ಷೆವರ್ಲೆ ಸುರಕ್ಷಿತ ಚಾಲನೆ~ ಆಂದೋಲನ ಆರಂಭಿಸಿದೆ. ಉದ್ಯಾನ ನಗರದಲ್ಲಿ ರಸ್ತೆ ಸುರಕ್ಷತೆ ಮತ್ತು ಸುರಕ್ಷಿತ ಚಾಲನೆ ದೃಷ್ಟಿಯಿಂದ ಈ ಸುರಕ್ಷತಾ ಆಂದೋಲನ ಆರಂಭಿಸಿದ್ದಾರೆ.ಸಂಚಾರ ನಿಯಮ, ವಾಹನ ಚಾಲನಾ ನಿಯಮ, ವಾಹನದಲ್ಲಿ ಅಳವಡಿಸಬಹುದಾದ ಸುರಕ್ಷತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಈ ಮೂಲಕ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದು ಈ ಪ್ರಚಾರ ಆಂದೋಲನದ ಮುಖ್ಯ ಉದ್ದೇಶವಾಗಿದೆ.`ಷೆವರ್ಲೆ ಸುರಕ್ಷಿತ ಚಾಲನೆ~ ಕ್ರಮದ ಅಂಗವಾಗಿ, ಸಾರ್ವಜನಿಕರಲ್ಲಿ ವಾಹನ ಚಾಲನೆ ಸುರಕ್ಷತೆ ಬಗ್ಗೆ ಸಮಗ್ರ ಮಾಹಿತಿ ನೀಡಲು, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ `ಐಟಿಪಿಬಿ ಮಾಲ್~ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಮಳಿಗೆ ಆರಂಭಿಸಿದರು.ರಸ್ತೆ ಸುರಕ್ಷತೆ ಮತ್ತು ವಾಹನಗಳಲ್ಲಿ ಚಾಲನಾ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮಹತ್ವ ಮನಗಾಣಿಸಲು ಈ ಮಳಿಗೆಯಲ್ಲಿ ಸಮಗ್ರ ಮಾಹಿತಿ ಒದಗಿಸಲಾಗುತ್ತದೆ. `ಷೆವರ್ಲೆ ಬೀಟ್~ ಸೇರಿದಂತೆ ತನ್ನ ಎಲ್ಲ ಮಾದರಿ ವಾಹನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರುವ ಚಿತ್ರಗಳನ್ನು ಮಳಿಗೆಯಲ್ಲಿ ಪ್ರದರ್ಶಿಸಲಿದೆ. ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ ಈ ಮಳಿಗೆ ಉದ್ಘಾಟಿಸಿದರು.`ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಉತ್ಪನ್ನ ಮತ್ತು ಅವರ ಸುರಕ್ಷತೆಗೆ ಗರಿಷ್ಠ ಮಟ್ಟದ ಆದ್ಯತೆ ನೀಡುವುದಕ್ಕೆ ನಾವು ಬದ್ಧರಾಗಿದ್ದೇವೆ~. ನಗರದ ರಸ್ತೆಗಳು ಸುರಕ್ಷಿತವಾಗಿರುವಂತೆ ಮಾಡಲು ನಾವು ಕೈಗೊಂಡ ಕ್ರಮಗಳಿಗೆ ಸಹಕಾರ ನೀಡಿದ್ದಕ್ಕೆ ಜನರಲ್ ಮೋಟಾರ್ಸ್ ಇಂಡಿಯಾ, ಬೆಂಗಳೂರು ಸಂಚಾರ ಪೋಲಿಸರಿಗೆ ಅಭಿನಂದನೆ ಸಲ್ಲಿಸುವುದಾಗಿ ಜನರಲ್ ಮೋಟಾರ್ಸ್‌ನ ಉಪಾಧ್ಯಕ್ಷ ಪಿ. ಬಾಲೇಂದ್ರನ್ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.