ಸುರಕ್ಷಿತ ಚಾಲನೆ: ಜಾಗೃತಿ ರ್ಯಾಲಿ

7

ಸುರಕ್ಷಿತ ಚಾಲನೆ: ಜಾಗೃತಿ ರ್ಯಾಲಿ

Published:
Updated:
ಸುರಕ್ಷಿತ ಚಾಲನೆ: ಜಾಗೃತಿ ರ್ಯಾಲಿ

ಬೆಳಗಾವಿ: ಸುರಕ್ಷಿತ ಸಂಚಾರ ಹಾಗೂ ವಾಹನ ಚಾಲನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಳಗಾವಿ ವೈದ್ಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಭಾನುವಾರ ರ್ಯಾಲಿ ನಡೆಸಿದರು.ನಗರದ ಪ್ರಮುಖ ರಸ್ತೆಗಳಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು ಸಂಚಾರ ಜಾಗೃತಿ ಕರಪತ್ರಗಳನ್ನು ಹಂಚಿದರು. ಮುಖ್ಯವಾಗಿ ಸಂಚಾರ ನಿಯಮ ಪಾಲನೆ ಮಾಡಬೇಕು. ನಗರದಲ್ಲಿ ನಿಧಾನವಾಗಿ ವಾಹನ ಚಲಾಯಿಸಬೇಕು. ಹೆಲ್ಮೆಟ್ ಧರಿಸಿರಬೇಕು. ಟ್ರಾಫಿಕ್ ಸಿಗ್ನಲ್‌ಗಳ ಪಾಲನೆ ಮಾಡುವಂತೆ ಅವರು ಮನವಿ ಮಾಡಿದರು.

 

ಜತೆಗೆ ಮದ್ಯಪಾನ ಮಾಡಿ ಚಾಲನೆ ಮಾಡಬಾರದು, ಕರ್ಕಶ ಹಾರ್ನ್‌ ಬಳಸಬಾರದು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು, ಹಿಂದೆ ಕುಳಿತವರ ಜತೆಗೆ ಮಾತನಾಡಬಾರದು. ಯಾವುದೇ ಕಾರಣಕ್ಕೂ ಟ್ರಾಫಿಕ್ ಸಿಗ್ನಲ್‌ಗಳನ್ನು ಉಲ್ಲಂಘನೆ ಮಾಡಬಾರದು ಎಂದು ಕರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry