ಬುಧವಾರ, ಜೂನ್ 16, 2021
26 °C

ಸುರತ್ಕಲ್ ಬಳಿ ಬಾವಿಗೇ ಬೆಂಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್ ಬಳಿ ಬಾವಿಗೇ ಬೆಂಕಿ!

ಸುರತ್ಕಲ್: ಇಲ್ಲಿಗೆ ಸಮೀಪದ ಕಳವಾರು ಎಂಬಲ್ಲಿ ಎಂಆರ್‌ಪಿಎಲ್ ಪೆಟ್ರೋಲಿಯಂ ಸಂಸ್ಕರಣಾ ಘಟಕದ ಬಳಿ ವಾಸಿಸುತ್ತಿರುವ ಗ್ರೆಗೋರಿ ಪತ್ರಾವೊ ಅವರ ಮನೆಯ ಬಾವಿಗೆ ಬೆಂಕಿ ಬಿದ್ದು ಧಗ ಧಗ ಉರಿದ ಘಟನೆ ಭಾನುವಾರ ನಡೆದಿದೆ.ನೀರು ತುಂಬಿದ್ದ ಈ ಬಾವಿಯು ಗ್ರೆಗೋರಿ ಅವರ ಕುಟುಂಬದ ಕುಡಿಯುವ ನೀರಿನ ಮೂಲವಾಗಿತ್ತು. ತೋಟಗಳಿಗೂ ಇದೇ ಬಾವಿಯ ನೀರು ಹಾಕುತ್ತಿದ್ದರು. ಆದರೆ ನಾಲ್ಕೈದು ದಿನಗಳಿಂದ ಬಾವಿಯಲ್ಲಿ ತೈಲದ ಆಂಶ ಕಂಡುಬಂದಿತ್ತು. ಭಾನುವಾರ ನೀರೆತ್ತಲು ಪಂಪ್ ಚಾಲೂ ಮಾಡಿದಾಗ ಪಂಪ್‌ನ ಸೈಲೆನ್ಸರ್‌ನಿಂದ ಬಿದ್ದ ಕಿಡಿಯಿಂದ ಬಾವಿಗೆ ಬೆಂಕಿ ಬಿತ್ತು. ಬೆಳಿಗ್ಗೆ 9.30ರ ಸುಮಾರಿಗೆ ಬಿದ್ದ ಬೆಂಕಿ ಮಧ್ಯಾಹ್ನ 1.30ರವರೆಗೂ ಉರಿಯುತ್ತಲೇ ಇತ್ತು. ಕೊನೆಗೆ ರಾಸಾಯನಿಕ ಬಳಸಿ ಬೆಂಕಿ ಶಮನಗೊಳಿಸಲಾಯಿತು. ಬೆಂಕಿಯ ಕೆನ್ನಾಲೆಗೆಗೆ ಪಂಪ್‌ಸೆಟ್ ಮಾತ್ರವಲ್ಲದೆ ಸುತ್ತಮುತ್ತಲಿನ ಗಿಡ, ಮರಗಳೂ ಸುಟ್ಟು ಹೋಗಿವೆ.ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ (ಎಂಎಸ್‌ಇಜೆಡ್) ತಮ್ಮ ಜಮೀನು ಬಿಟ್ಟುಕೊಡಲು ಒಪ್ಪದೆ ಸಾಗುವಳಿ ನಡೆಸುತ್ತಿದ್ದ ಗ್ರೆಗೋರಿ ಅವರಿಗೆ ಇದೀಗ ಕೃಷಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಗತಿ ಇಲ್ಲದಂತಾಗಿದೆ.ಸ್ಪಷ್ಟನೆ: ಗ್ರೆಗೋರಿ ಅವರು ನೆಲೆಸಿರುವ ಸ್ಥಳ ಎಂಆರ್‌ಪಿಎಲ್ ತನ್ನ 3ನೇ ಹಂತದ ಕಾಮಗಾರಿಗಳಿಗೆ ಈಗಾಗಲೇ ಸ್ವಾಧೀನಪಡಿಸಿಕೊಂಡ ನಿವೇಶನವಾಗಿದ್ದು, ಪರಿಹಾರ ಪಡೆದ ನಂತರವೂ ಅಕ್ರಮವಾಗಿ ಅಲ್ಲಿ ನೆಲೆಸಿ ಕಂಪೆನಿಯ ವಿಸ್ತರಣಾ ಕಾಮಗಾರಿಗಳಿಗೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಎಂಆರ್‌ಪಿಎಲ್ ಪತ್ರಿಕಾ ಪ್ರಕಟಣೆ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.