ಸುರಪುರ: ಪಿಂಚಣಿದಾರರನ್ನು ಮುಂದುವರೆಸಲು ಆಗ್ರಹ

7

ಸುರಪುರ: ಪಿಂಚಣಿದಾರರನ್ನು ಮುಂದುವರೆಸಲು ಆಗ್ರಹ

Published:
Updated:

ಸುರಪುರ: ತಾಲ್ಲೂಕಿನಲ್ಲಿ ರದ್ದು ಪಡಿಸಿರುವ ವೃದ್ಧಾಪ್ಯ, ವಿಧವಾ ಇತರ ಪಿಂಚಣಿದಾರರನ್ನು ಮುಂದುವರೆಸುವಂತೆ ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ಶುಕ್ರವಾರ ತಹಸೀಲ್ದಾರ್ ಸಂಗನಬಸಯ್ಯ ಗಣಾಚಾರಿ ಅವರಿಗೆ ಮನವಿ ಸಲ್ಲಿಸಿತು.ನೇತೃತ್ವ ವಹಿಸಿದ್ದ ಪ್ಯಾಂಥರ್‌ನ ಜಿಲ್ಲಾಧ್ಯಕ್ಷ ಆದಪ್ಪ ಹೊಸಮನಿ ಮಾತನಾಡಿ, ತಾಲ್ಲೂಕಿನಲ್ಲಿ 2,291 ವೃಧ್ಯಾಪ್ಯ, 1,426 ವಿಧವಾ, 1,057 ಸಂಧ್ಯಾ ಸುರಕ್ಷಾ, 683 ಅಂಗವಿಕಲ ಹೀಗೆ ಒಟ್ಟು 5,457 ಪಿಂಚಣಿದಾರರನ್ನು ರದ್ದುಗೊಳಿಸಲಾಗಿದೆ. ಇದರಿಂದ ಮಾಶಾಸನವನ್ನೆ ನಂಬಿ ಜೀವನ ಸಾಗಿಸುತ್ತಿದ್ದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ದೂರಿದರು.ಖೊಟ್ಟಿ ಪಿಂಚಣಿದಾರರ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸಲು ತಾವು ಗ್ರಾಮ ಲೆಕ್ಕಿಗ ಮತ್ತು ಕಂದಾಯ ನಿರೀಕ್ಷಕರಿಗೆ ಆದೇಶ ಮಾಡಿದ್ದಿರಿ. ಆದರೆ ಅವರು ಗ್ರಾಮ ಸಹಾಯಕರಿಂದ ಮಾಹಿತಿ ಸಂಗ್ರಹಿಸಿ ಅಸಮರ್ಪಕ ವರದಿ ನೀಡಿದ್ದಾರೆ.ಇದನ್ನೆ ಆಧಾರವಾಗಿಟ್ಟು ಕೊಂಡು ನೀವು ದಾಖಲೆಯ 5457 ಜನ ವೇತನದಾರರ ಪಿಂಚಣಿ ರದ್ದು ಪಡಿಸಿದ್ದು ಅನ್ಯಾಯವಾಗಿದೆ ಎಂದು ತಹಸೀಲ್ದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.ಇದೇ ಅಧಿಕಾರಿಗಳು ಪಿಂಚಣಿದಾರರು ಅರ್ಜಿ ಸಲ್ಲಿಸಿದಾಗ ಸೂಕ್ತವಾಗಿ ಪಂಚನಾಮ ಮಾಡದೆ ವರದಿ ಸಲ್ಲಿಸಿದ್ದಾರೆ. ಇದೆ ಕಾರಣಕ್ಕೆ ಕೆಲವು ಬೋಗಸ್ ಪಿಂಚಣಿದಾರರು ಉದ್ಭವಿಸಿದ್ದಾರೆ. ಆದರೆ ಈ ಸಂಖ್ಯೆ ಬಹಳ ಕಡಿಮೆ. ಸಧ್ಯ ರದ್ದು ಪಡಿಸಲಾಗಿರುವ 5757 ಜನ ಪಿಂಚಣಿದಾರರಲ್ಲಿ ಶೇ. 90 ರಷ್ಟು ಅರ್ಹ ಪಿಂಚಣಿದಾರರಿದ್ದಾರೆ ಎಂದು ಆದಪ್ಪ ವಿವರಿಸಿದರು.ಕಾರಣ ರದ್ದು ಪಡಿಸಿರುವ ಆದೇಶವನ್ನು ವಾಪಾಸ್ ಪಡೆಯಬೇಕು. ಎಲ್ಲ ಪಿಂಚಣಿದಾರರಿಗೆ ಪುನಃ ಮಾಸಾಶನ ದೊರೆಯುವಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಪಿಂಚಣಿದಾರರೊಂದಿಗೆ ಹೋರಾಟ ಮಾಡಲಾಗುವುದು ಎಂದು ಹೊಸಮನಿ ಎಚ್ಚರಿಸಿದರು.ಮನವಿಗೆ ಸ್ಪಂದಿಸಿದ ತಹಸೀಲ್ದಾರ್, ರದ್ದಾದ ಪಟ್ಟಿಯಲ್ಲಿ ನಿಜವಾದ ಫನಾಭುವಿಗಳು ಇದ್ದರೆ ಅಂತವರು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಈ ಮೊದಲು ಮಂಜೂರಾದ ಆದೇಶ ಪತ್ರದ ಪ್ರತಿ ಜೊತೆಗೆ ಚುನಾವಣಾ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಸಲ್ಲಿಸಿದರೆ ಅವರನ್ನು ಪುನಃ ಮುಂದುವರೆಸುವ ಭರವಸೆ ನೀಡಿದರು.ಮರಲಿಂಗಪ್ಪ ನಾಟೇಕಾರ್, ಭೀಮಣ್ಣ ಹೊಸಮನಿ, ಸಂಗಣ್ಣ ಮಲ್ಲೇದ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry