ಸುರಸುಂದರ ಪೋಚೆರಾ

7

ಸುರಸುಂದರ ಪೋಚೆರಾ

Published:
Updated:
ಸುರಸುಂದರ ಪೋಚೆರಾ

ಸಹ್ಯಾದ್ರಿ ಸಾಲುಗಳಲ್ಲಿ ಹರಿದು ಬರುವ ಗೋದಾವರಿ ನದಿ ಆದಿಲಾಬಾದ್‌ನ ಬಳಿ ಸುಂದರ ಹಾಗೂ ವಿಸ್ತಾರವಾದ ಜಲಪಾತವೊಂದನ್ನು ಸೃಷ್ಟಿಸಿದೆ. ಅದರ ಹೆಸರು ಪೋಚೆರಾ ಜಲಪಾತ.

 

ಆಂಧ್ರಪ್ರದೇಶದಲ್ಲಿಯೇ `ಕಾಡಿನ ಜಿಲ್ಲೆ~ ಎಂದು ಹೆಸರುವಾಸಿಯಾಗಿರುವ ಆದಿಲಾಬಾದ್ ಜಿಲ್ಲೆಗೆ ಸೇರಿದ ಈ ಜಲನಿಧಿ ಕಣ್ಮನ ತಣಿಸುವಷ್ಟು ಸುಂದರವಾಗಿದೆ. ದಟ್ಟ ಕಾಡಿನ ನಡುವೆ ಕಾಣುವ ಅಪರೂಪದ ಜಲಧಾರೆಯಿದು. ಇಲ್ಲಿ ಗೋದಾವರಿ ನದಿ ಕೇವಲ 20 ಮೀಟರ್ ಎತ್ತರದಿಂದ ಧುಮ್ಮಿಕ್ಕಿದರೂ ಅದ್ಭುತವಾದ ನೋಟವನ್ನು ಸೃಷ್ಟಿಸಿದೆ.ಮಹಾರಾಷ್ಟ್ರದಲ್ಲಿ ಹುಟ್ಟಿ ಆಂಧ್ರಪ್ರದೇಶದತ್ತ ಹರಿದು ಬರುವ ಗೋದಾವರಿ ನದಿ ಸಹ್ಯಾದ್ರಿ ಬೆಟ್ಟ ಸಾಲುಗಳಲ್ಲಿ ಬಳುಕುತ್ತಾ ಸಾಗುತ್ತದೆ. ಆಂಧ್ರಪ್ರದೇಶದ ಜೀವನದಿ ಎನಿಸಿಕೊಂಡಿರುವ ಗೋದಾವರಿಯ ಸೊಬಗು ವರ್ಣನೆಗೆ ನಿಲುಕದ್ದು. ಧಾರೆಯಾಗಿ ಧುಮುಕುವ ನದಿ ಪೋಚೆರಾ ಜಲಪಾತಕ್ಕೆ ವಿಶಿಷ್ಟ ಅಂದವನ್ನು ನೀಡಿದೆ.ಆದಿಲಾಬಾದ್‌ನಿಂದ ಕೇವಲ 50 ಕಿ.ಮೀ ದೂರ ಇರುವ ಈ ಸುಂದರ ಜಲಪಾತದ ಕೆಳಗೆ ಆಳವಾದ ಕಮರಿ ಇದೆ. ಆ ಕಾರಣದಿಂದಾಗಿ ಜಲಪಾತ ನೋಡಲು ಹೋಗುವವರು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ.ಸಹ್ಯಾದ್ರಿ ಬೆಟ್ಟ ಸಾಲುಗಳಲ್ಲಿ ದಟ್ಟ ಕಾಡು ಇರುವುದರಿಂದ ಬೇಸಿಗೆಯ ಬೇಗೆ ಈ ಜಲಪಾತಕ್ಕೆ ಅಷ್ಟಾಗಿ ತಟ್ಟುವುದಿಲ್ಲ. ಸ್ಥಳೀಯರು ವರ್ಷದ ಎಲ್ಲಾ ದಿನಗಳಲ್ಲೂ ಇಲ್ಲಿಗೆ ಬಂದು ಮನದಣಿಯೆ ಮೀಯುತ್ತಾರೆ. ಮಳೆ ದಿನಗಳಲ್ಲಂತೂ ಜಲಪಾತಕ್ಕೆ ಯೌವನ ಸ್ಪರ್ಶ. ಕಾಡಿನ ನಡುವೆ ಇರುವುದರಿಂದ ಪರಿಸರ ಮಾಲಿನ್ಯದಿಂದಲೂ ಈ ಪ್ರದೇಶ ಮುಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry