ಭಾನುವಾರ, ನವೆಂಬರ್ 17, 2019
28 °C

ಸುರಾಸುರ!

Published:
Updated:

ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್‌ರನ್ನು `ಸುರ ಸುಂದರಿ' ಎಂದು ಕರೆದು ವಿವಾದಕ್ಕೀಡಾದ ಅಮೆರಿಕದ ಅಧ್ಯಕ್ಷ ಒಬಾಮ, ಅವರ ಕ್ಷಮೆ ಕೇಳಿದ್ದಾರಂತೆ (ಪ್ರ.ವಾ., ಏ. 7).ವಾಸ್ತವವಾಗಿ, ಒಬಾಮ ಯಾಚಿಸಬೇಕಾದ್ದು ಇತರ ಮಹಿಳೆಯರ ಕ್ಷಮೆಯನ್ನು; ಕಮಲಾಕ್ಷಮೆಯನ್ನಲ್ಲ! ಅದರ ಬದಲು, ಕಮಲಾ ಹ್ಯಾರಿಸ್ “ಅ.ಸುರ ಸುಂದರಿ” ಎಂಬ ಹೇಳಿಕೆಯನ್ನು ಕೊಟ್ಟುಬಿಟ್ಟಿದ್ದರೆ, ಎಲ್ಲರಿಗೂ ಸಂತೋಷವಾಗುತ್ತಿತ್ತು! (ಅದರಲ್ಲೂ, ಮಿಶೆಲ್‌ಗೆ).ಇಷ್ಟಕ್ಕೂ, ಈ ಎಲ್ಲ ಉಸಾಬರಿ ಒಬಾಮ ಅವರಿಗೇಕೆ ಬೇಕಿತ್ತು? (ಸುರಸುಂದರಿ, ಅಪ್ಸರೆ ಮುಂತಾದುವೆಲ್ಲ ಕವಿಗಳ ಬತ್ತಳಿಕೆಗಳ ಅಸ್ತ್ರಗಳು-ಕೆಲವೊಮ್ಮೆ ಕೇವಲ `ಕವಿಸಮಯ'ಗಳು!)

ಪ್ರತಿಕ್ರಿಯಿಸಿ (+)