ಸುರೇಶ್ ಕಲ್ಮಾಡಿ ನಿಕಟವರ್ತಿಗಳ ಬಂಧನ

7

ಸುರೇಶ್ ಕಲ್ಮಾಡಿ ನಿಕಟವರ್ತಿಗಳ ಬಂಧನ

Published:
Updated:

ನವದೆಹಲಿ (ಐಎಎನ್‌ಎಸ್): ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣಕ್ಕೆ ಸಂಬಂಧಿಸಿದಂತೆ ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷ  ಸುರೇಶ್ ಕಲ್ಮಾಡಿ ಅವರ ಇಬ್ಬರು ನಿಕಟವರ್ತಿಗಳನ್ನು ಸಿಬಿಐ ಬುಧವಾರ ಬಂಧಿಸಿದೆ. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಲಲಿತ್ ಭಾನೋಟ್ ಮತ್ತು ಪ್ರಧಾನ ನಿರ್ದೇಶಕರಾಗಿದ್ದ ವಿ.ಕೆ.ವರ್ಮಾ ಬಂಧಿತರು. 25 ವರ್ಷಕ್ಕೂ ಹೆಚ್ಚು ಸಮಯ ಈ ಇಬ್ಬರೂ ಕ್ರೀಡಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಕ್ರೀಡಾ ಗಡಿಯಾರಕ್ಕೆ ಸಂಬಂಧಿಸಿದಂತೆ ಸ್ವಿಟ್ಜರ್‌ಲೆಂಡ್‌ನ ಕಂಪೆನಿಯೊಂದಿಗೆ ನಡೆದ 1.7 ಶತಕೋಟಿ ರೂಪಾಯಿ ಒಪ್ಪಂದದಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಇವರನ್ನು, ಕಳೆದ ತಿಂಗಳು ವಜಾ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry